alex Certify ಫೆಬ್ರವರಿ 24 ಕ್ಕೆ ‘ಗೌಳಿ’ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿ 24 ಕ್ಕೆ ‘ಗೌಳಿ’ ರಿಲೀಸ್

ಶ್ರೀನಗರ ಕಿಟ್ಟಿ ನಟನೆಯ ಸೂರ ನಿರ್ದೇಶನದ ಬಹು ನಿರೀಕ್ಷಿತ ‘ಗೌಳಿ’ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದೇ ತಿಂಗಳು ಫೆಬ್ರವರಿ 24ರಂದು  ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಶ್ರೀನಗರ ಕಿಟ್ಟಿ ಅವರ ರಗಡ್ ಲುಕ್ ಗೆ ಸಿನಿ ಪ್ರೇಕ್ಷಕರು ಈಗಾಗಲೇ ಫಿದಾ ಆಗಿದ್ದಾರೆ. ಈ ಚಿತ್ರದ ಹಾಡುಗಳು ಕೂಡ ಯೂಟ್ಯೂಬ್ ನಲ್ಲಿ ಭರ್ಜರಿ ವೀಕ್ಷಣೆ ಪಡೆದುಕೊಳ್ಳುವ ಮೂಲಕ ಟ್ರೆಂಡಿಂಗ್ ನಲ್ಲಿವೆ.

ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರಿಗೆ ಜೋಡಿಯಾಗಿ ಪಾವನ ಅಭಿನಯಿಸಿದ್ದು, ಶರತ್ ಲೋಹಿತಾಶ್ವ, ರಂಗಾಯಣ ರಘು, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ಶಿವಣ್ಣ ರುದ್ರೇಶ್, ಸೇರಿದಂತೆ ಮೊದಲಾದ ಕಲಾವಿದರು ತೆರೆಹಂಚಿಕೊಂಡಿದ್ದಾರೆ. ಸೋಹನ್ ಫಿಲಂ ಫ್ಯಾಕ್ಟರಿ ಬ್ಯಾನರ್ ನಡಿ ರಘು ಸಿಂಗಮ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...