
ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ನಿಧನದ ನಂತರ ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ. ಹಾಗೂ ಪ್ರಸಿದ್ಧ ಬಂಗಾಳಿ ಗಾಯಕಿ ಸಂಧ್ಯಾ ಮುಖರ್ಜಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಇದು ಸಂಗೀತ ಪ್ರೇಮಿಗಳ ಹೃದಯದಲ್ಲಿ ಶೂನ್ಯವನ್ನುಂಟು ಮಾಡಿದೆ. ಟ್ವಿಟ್ಟರ್ ನಲ್ಲಿ ಸಂಗೀತ ದಿಗ್ಗಜರಿಗೆ ನೆಟ್ಟಿಗರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಬಪ್ಪಿ ಲಹರಿ ಅವರ ಡಿಸ್ಕೋ ಬೀಟ್ಗಳು ಬಾಲಿವುಡ್ನಲ್ಲಿ ಜನಪ್ರಿಯಗೊಂಡಿದೆ. ಹಿಂದಿ ಮತ್ತು ಬಂಗಾಳಿ ಚಲನಚಿತ್ರಗಳ ಜೊತೆಗೆ, ಅವರು ಬಹಳಷ್ಟು ತೆಲುಗು ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಭಾರತೀಯ ಸಂಗೀತದಲ್ಲಿ ಏನು ನಡೆಯುತ್ತಿದೆ ಎಂದು ನೆಟ್ಟಿಗರು ದಿಗ್ಗಜರಿಗೆ ಅಶ್ರುತರ್ಪಣ ಸಲ್ಲಿಸಿದ್ದಾರೆ. ಫೆಬ್ರವರಿ ತಿಂಗಳೊಂದರಲ್ಲೇ ಮೂವರು ಪ್ರಸಿದ್ಧ ಗಾಯಕರನ್ನು ಕಳೆದುಕೊಂಡ ಅಭಿಮಾನಿಗಳು ನೋವಿನಲ್ಲಿದ್ದಾರೆ.
https://twitter.com/adsaying/status/1493830237947576321?ref_src=twsrc%5Etfw%7Ctwcamp%5Etweetembed%7Ctwterm%5E1493830237947576321%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbappi-lahiri-sandhya-lata-february-has-been-cruel-for-music-lovers-says-twitter-4777547.html