alex Certify ಫೆಬ್ರವರಿಯಲ್ಲಿ ಭಾರತದ ರಸ್ತೆಗಿಳಿಯಲಿದೆ ಬಜಿಂಗಾ ಇ-ಸೈಕಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿಯಲ್ಲಿ ಭಾರತದ ರಸ್ತೆಗಿಳಿಯಲಿದೆ ಬಜಿಂಗಾ ಇ-ಸೈಕಲ್

ಸ್ವದೇಶಿ ಇ-ಮೊಬಿಲಿಟಿ ಬ್ರ್ಯಾಂಡ್ Nexzu, ಭಾರತೀಯ ಮಾರುಕಟ್ಟೆಗೆ ತನ್ನ ಇ-ಸೈಕಲ್‌ಗಳ ಪೋರ್ಟ್‌ಫೋಲಿಯೊವನ್ನು ಪ್ರಕಟಿಸಿದೆ. ಕಂಪನಿಯು ಬಜಿಂಗಾ(Bazinga) ಎಂಬ ಹೊಸ ಲಾಂಗ್ ರೇಂಜ್ ನ ಇ-ಸೈಕಲ್ ಅನ್ನು ಪರಿಚಯಿಸಿದೆ. ಹೊಸ ಬಜಿಂಗಾ ಶ್ರೇಣಿಯ ಇ-ಸೈಕಲ್‌ಗಳ ಆರಂಭಿಕ ಬೆಲೆ 49,445 ರೂ. ಇದು ಮೂಲ ಟ್ರಿಮ್ ನ‌ ಬೆಲೆ ಆದರೆ ಹೆಚ್ಚಿನ-ಸ್ಪೆಕ್ ಮತ್ತು ಬಜಿಂಗಾ ಕಾರ್ಗೋ ಇ-ಸೈಕಲ್‌ನ ಬೆಲೆ 51,525 ರೂ. ಎಂದು ಕಂಪನಿ ಸ್ಪಷ್ಟಪಡಿಸಿದೆ.

ಯುನಿಸೆಕ್ಸ್ ಇ-ಸೈಕಲ್ ಆಗಿರುವ ಬಜಿಂಗಾ, ಡಿಟ್ಯಾಚಬಲ್ ಹಾಗೂ Li-ion ಬ್ಯಾಟರಿಯೊಂದಿಗೆ 100km ವಿಸ್ತೃತ ಶ್ರೇಣಿಯೊಂದಿಗೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಗಟ್ಟಿಯಾಗಿ ನಿರ್ಮಾಣವಾಗಿರುವ ಬಜಿಂಗಾ, 15 ಕೆಜಿ ಲೋಡ್ ಅನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗಾಗಲೇ ಬಜಿಂಗಾಗೆ ಅಧಿಕೃತವಾಗಿ ಬುಕಿಂಗ್‌ಗಳು ಪ್ರಾರಂಭವಾಗಿದ್ದು, ಈ ವರ್ಷದ ಫೆಬ್ರವರಿಯಲ್ಲಿ ವಿತರಣೆಯು ಪ್ರಾರಂಭವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಹೊಸ ಬಜಿಂಗಾ ಶ್ರೇಣಿಯು ‘ಫಿಟ್‌ನೆಸ್-ಕೇಂದ್ರಿತ ಎಂದು ಹೇಳಿರುವ ಕಂಪನಿ, ಖರೀದಿ ಪ್ರಕ್ರಿಯೆಯನ್ನು ಸರಾಗಗೊಳಿಸುವ ಸಲುವಾಗಿ Zest Money ಯೊಂದಿಗೆ ಸಹಯೋಗ ಮಾಡಿಕೊಂಡಿದೆ. ಇದರಿಂದ ಗ್ರಾಹಕರಿಗೆ ಸುಲಭ ಪಾವತಿ ಆಯ್ಕೆ ಸಿಗಲಿದ್ದು, ಖರೀದಿ ಪ್ರಕ್ರಿಯೆ ಸರಾಗವಾಗಲಿದೆ‌. ಬಜಿಂಗಾವನ್ನ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿರುವುದು, ಇ-ಮೊಬಿಲಿಟಿಯನ್ನು ಉತ್ತೇಜಿಸುವ ಗುರಿಯಿಂದ. ಈ ಸೈಕಲ್ ಗಳು ಜನರ ಜೀವನದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಮತ್ತು ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ನೀಡುತ್ತವೆ ಎಂದು ಕಂಪನಿ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...