alex Certify ಫುಟ್ ಪಾತ್ ಮೇಲೆ ಕಾರು ಚಲಾಯಿಸಿ ನಾಲ್ವರ ಸಾವಿಗೆ ಕಾರಣನಾದ ಬಾಲಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್ ಪಾತ್ ಮೇಲೆ ಕಾರು ಚಲಾಯಿಸಿ ನಾಲ್ವರ ಸಾವಿಗೆ ಕಾರಣನಾದ ಬಾಲಕ….!

ಹೈದರಾಬಾದ್ : ಅಪ್ರಾಪ್ತ ಬಾಲಕನೊಬ್ಬ ತಾನೇ ಕಾರು ಚಲಾಯಿಸಿಕೊಂಡು ಹೋಗಿ, ಫುಟ್ ಪಾತ್ ಮೇಲೆ ಹತ್ತಿಸಿ ನಾಲ್ವರ ಸಾವಿಗೆ ಕಾರಣನಾಗಿದ್ದಾನೆ.
ಈ ಘಟನೆ ತೆಲಂಗಾಣದ ಕರೀಮ್ ನಗರ ಜಿಲ್ಲೆಯಲ್ಲಿ ನಡೆದಿದ್ದು, 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೇ ಈ ಕೃತ್ಯ ಎಸಗಿದ್ದಾನೆ. ಈತನೊಂದಿಗೆ ಇನ್ನೂ ಮೂವರು ಕಾರಿನಲ್ಲಿದ್ದು, ಅವರೆಲ್ಲ ಕೂಡ ಅಪ್ರಾಪ್ತರೇ ಎನ್ನಲಾಗಿದೆ.

ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ವೇಗವಾಗಿ ಚಲಾಯಿಸುತ್ತಿದ್ದ ಕಾರು, ಬಾಲಕನ ನಿಯಂತ್ರಣ ತಪ್ಪಿ ಫುಟ್ ಪಾತ್ ಮೇಲೆ ಹೋಗಿದೆ. ಈ ಸಂದರ್ಭದಲ್ಲಿ ಆ ಹುಡುಗ ಗಾಬರಿಯಲ್ಲಿ ಬ್ರೇಕ್ ಅದುಮುವುದನ್ನು ಬಿಟ್ಟು, ಆಕ್ಸಲೇಟರ್ ಒತ್ತಿದ್ದಾನೆ. ಹೀಗಾಗಿ ಕಾರಿಗೆ ಮತ್ತಷ್ಟು ವೇಗ ಬಂದಿದೆ. ಅಲ್ಲಿ ಕುಳಿತಿದ್ದ ಮಹಿಳೆಯರ ಮೇಲೆಯೇ ಕಾರು ಹರದಿದೆ.

14 ವರ್ಷದ ಬಾಲಕಿ ಸೇರಿದಂತೆ ಮೂವರು ಮಹಿಳೆಯರ ಮೇಲೆ ಕಾರು ಹಾಯ್ದು ಅವರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಘಟನೆ ನಡೆಯುತ್ತಿದ್ದಂತೆ ಬಾಲಕರು ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಆ ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅಲ್ಲದೇ, ಬಾಲಕನ ತಂದೆಯ ವಿರುದ್ಧವೂ ದೂರು ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...