ಕೆ.ಎಸ್.ಆರ್.ಟಿ.ಸಿ. ಅಥವಾ ಬಿಎಂಟಿಸಿ ಬಸ್‌ಗಳಲ್ಲಿ ಜನರ ನೂಕು ನುಗ್ಗಲು ಸಾಮಾನ್ಯ. ಕೆಲವೊಮ್ಮೆ ಬಸ್ ಖಾಲಿ ಇದ್ದರೂ ಪ್ರಯಾಣಿಕರು ಬಾಗಿಲ ಬಳಿಯೇ ನಿಂತಿರ್ತಾರೆ. ಕಂಡಕ್ಟರ್ ಪದೇ ಪದೇ ಹೇಳಿದರೂ ಅವರು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ.
ಇಲ್ಲಿಯೂ ಕೂಡ ವ್ಯಕ್ತಿಯೊಬ್ಬ ಬಸ್ ಬಾಗಿಲ ಬಳಿಯೇ ನಿಂತಿರುತ್ತಾನೆ. ಕಂಡಕ್ಟರ್ ಎಷ್ಟೆ ಹೇಳಿದರೂ ಆತ ಅಲ್ಲೇ ನಿಂತಿರುತ್ತಾನೆ. ತಾಳ್ಮೆ ಕಳೆದುಕೊಂಡ ಕಂಡಕ್ಟರ್ ಆತನಿಗೆ ಪದೇ ಪದೇ ಒದ್ದಿದ್ದಾನೆ. ಈ ದೃಶ್ಯವನ್ನ ಸಹಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಈ ಘಟನೆ ನಡೆದಿರೋದು ತಮಿಳುನಾಡಿನ ತಿರುವಲ್ಲೂರಿನಲ್ಲಿ. ಬಸ್ ಫುಟ್‌ಬೋರ್ಡ್‌ನಲ್ಲಿರೋ ವ್ಯಕ್ತಿಗೆ ಮೊದಲು ಕಂಡಕ್ಟರ್ ಬಸ್ ಒಳಗೆ ಬರುವುದಕ್ಕೆ ಹೇಳಿದ್ದಾನೆ. ಎಷ್ಟೇ ಹೇಳಿದರೂ ಒಳಗೆ ಬರದ ವ್ಯಕ್ತಿ, ಕಂಡಕ್ಟರ್ ಜೊತೆ ವಾದ ಮಾಡಿದ್ದಾನೆ. ಕೊನೆಗೆ ತಾಳ್ಮೆ ಕಳೆದುಕೊಂಡ ಬಸ್ ಕಂಡಕ್ಟರ್ ಆ ಪ್ರಯಾಣಿಕನಿಗೆ ಕಾಲಿನಿಂದ ಒದ್ದಿದ್ದಾನೆ.
ಬಸ್ ಬಾಗಿಲ ಬಳಿ ನಿಂತಾಗ ಅನೇಕ ಬಾರಿ ಅವಘಡಗಳು ಸಂಭವಿಸಿವೆ. ಬಸ್‌ನಲ್ಲಿರೋ ಪ್ರತಿ ಕಂಡಕ್ಟರ್ ಪ್ರಯಾಣಿಕರ ಹಿತ ದೃಷ್ಟಿಯಿಂದಲೇ ಬಾಗಿಲ ಬಳಿ ನಿಲ್ಲದಿರಿ ಅಂತ ಆಗಾಗ ಹೇಳುತ್ತಲೇ ಇರುತ್ತಾರೆ. ಆದರೂ ಪ್ರಯಾಣಿಕರು ಕಂಡಕ್ಟರ್ ಮಾತುಗಳನ್ನ ನಿರ್ಲಕ್ಷ್ಯ ಮಾಡುತ್ತಾರೆ. ಅನೇಕ ಬಾರಿ ಅವಘಡಗಳು ಸಂಭವಿಸಿದಾಗ ಬಸ್ ಕಂಡಕ್ಟರ್ ಹಾಗೂ ಡ್ರೈವರ್ ಇವರೇ ಜವಾಬ್ದಾರರು ಅಂತ ಹೇಳುತ್ತಾರೆ. ಇದೇ ಉದ್ದೇಶ ಇಟ್ಟುಕೊಂಡು ಇಲ್ಲಿ ಕಂಡಕ್ಟರ್ ಪ್ರಯಾಣಿಕರಿಗೆ ಫುಟ್‌ಬೋರ್ಡ್ ಮೇಲೆ ನಿಲ್ಲದಿರಲು ಹೇಳಿದ್ದಾರೆ. ಕೊನೆಗೆ ಮಾತು ಕೇಳದ ಪ್ರಯಾಣಿಕನಿಗೆ ಒದ್ದಿದ್ದಾರೆ. ಕೆಲವರು ಈ ವಿಡಿಯೋ ನೋಡಿ ಕಂಡಕ್ಟರ್ ಒದ್ದಿರೋದನ್ನ ಖಂಡಿಸಿದ್ದಾರೆ.