
ಬೊಜ್ಜು ಈಗ ಸಾಮಾನ್ಯ ಸಮಸ್ಯೆ. ತೂಕ ಕಡಿಮೆ ಮಾಡಿಕೊಳ್ಳಲು ಜನರು ಸಾಕಷ್ಟು ಪ್ರಯತ್ನಪಡ್ತಾರೆ. ತರಕಾರಿ, ಹಣ್ಣುಗಳನ್ನು ಸೇವನೆ ಮಾಡಿದ್ರೂ ತೂಕ ಏರುತ್ತಲೇ ಇರುತ್ತೆ. ಮತ್ತೆ ಕೆಲವರು ಫಿಜ್ಜಾ, ಬರ್ಗರ್ ತಿಂದ್ರೂ ತೂಕ ಏರಿಕೆಯಾಗುವುದಿಲ್ಲ. ಇದ್ರ ರಹಸ್ಯವೇನು ಗೊತ್ತಾ..?
ಮೆಟಬಾಲಿಸಂ ಇದಕ್ಕೆ ಮುಖ್ಯ ಕಾರಣ. ಕೆಲವರ ದೇಹದಲ್ಲಿ ಮೆಟಬಾಲಿಸಂ ದರ ಹೆಚ್ಚಿರುತ್ತದೆ. ಅವರು ವ್ಯಾಯಾಮ, ವರ್ಕ್ ಔಟ್ ಮಾಡದೆ ವಿಶ್ರಾಂತಿಯಲ್ಲಿದ್ದರೂ ಅವ್ರ ದೇಹದಲ್ಲಿ ಮೆಟಬಾಲಿಸಂ ಉತ್ಪತ್ತಿಯಾಗುತ್ತದೆ. ಇದು ಕ್ಯಾಲೊರಿಗಳನ್ನು ವೇಗವಾಗಿ ಬರ್ನ್ ಮಾಡುತ್ತದೆ. ಮೆಟಬಾಲಿಸಂ ದರ ಹೆಚ್ಚಿರುವ ವ್ಯಕ್ತಿಗಳು ಎಷ್ಟು ಆಹಾರ ಸೇವನೆ ಮಾಡಿದ್ರೂ ಅವ್ರ ತೂಕ ಹೆಚ್ಚುವುದಿಲ್ಲ.
ಮೆಟಬಾಲಿಸಂ ಮಾತ್ರವಲ್ಲ, ಇನ್ನೂ ಕೆಲ ಕಾರಣಗಳು ತೂಕ ಏರದಿರಲು ಕಾರಣ. ಇದ್ರಲ್ಲಿ ತಿನ್ನುವ ವೇಗ ಕೂಡ ಒಂದು. ನೀವೂ ತೂಕ ಕಡಿಮೆ ಮಾಡಲು ಬಯಸಿದ್ರೆ ಊಟ, ಆಹಾರ ಸೇವನೆ ಮಾಡುವ ವೇಳೆ ಆತುರ ಬೇಡ. ಆಹಾರವನ್ನು ನಿಧಾನವಾಗಿ ಅಗೆದು ತಿನ್ನಬೇಕು. ಆಗ ಬೇಗ ಹೊಟ್ಟೆ ತುಂಬಿದ ಅನುಭವವಾಗುತ್ತದೆ.
ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹಸಿವನ್ನು ಹೆಚ್ಚಿಸುತ್ತದೆ. ಕಾರ್ಬೋಹೈಡ್ರೇಟ್ ಮತ್ತು ಕೊಬ್ಬನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಕಷ್ಟವಾಗುತ್ತದೆ. ಸುಖಕರ ನಿದ್ರೆ ಮಾಡದೆ ಹೋದ್ರೆ ಕಾರ್ಟಿಸೋಲ್ ಹಾರ್ಮೋನ್ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದಾಗಿ ದೇಹದ ತೂಕ ಹೆಚ್ಚಾಗುತ್ತದೆ. ತೂಕವನ್ನು ಕಾಪಾಡಿಕೊಳ್ಳಲು ಬಯಸಿದರೆ ಪ್ರತಿದಿನ ಉತ್ತಮ ನಿದ್ರೆ ಮಾಡುವುದು ಬಹಳ ಮುಖ್ಯ.