ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಕಂಪನಿಯ ಅಗ್ಗದ ಎಸ್‌ಯುವಿ ಎಂದರೆ Q2 ಆಗಿತ್ತು. ಆದ್ರೆ ಕಂಪನಿ ಈಗಾಗ್ಲೇ ಅದನ್ನು ಸ್ಥಗಿತಗೊಳಿಸಿದೆ. ಇದಾದ್ಮೇಲೆ ಕಂಪನಿಯ SUV ಪೋರ್ಟ್‌ಫೋಲಿಯೊ Audi Q3 ನೊಂದಿಗೆ ಪ್ರಾರಂಭವಾಗುತ್ತದೆ. ಕಂಪನಿಯು ಈಗ ಈ SUVಯ ಸ್ಪೋರ್ಟ್ಸ್ ಆವೃತ್ತಿ Audi Q3 ಸ್ಪೋರ್ಟ್‌ಬ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಇದು ಸ್ಪೋರ್ಟಿ ವಿನ್ಯಾಸದೊಂದಿಗೆ ಶಕ್ತಿಯುತ ಕಾರ್ಯಕ್ಷಮತೆಯನ್ನು ಹೊಂದಿದೆ. SUV 190 hp ಮತ್ತು 320 Nm ಟಾರ್ಕ್ ಅನ್ನು ಉತ್ಪಾದಿಸುವ 2.0-ಲೀಟರ್ TFSI ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.
ಇದು ಆಲ್ ವೀಲ್ ಡ್ರೈವ್‌ನ ವೈಶಿಷ್ಟ್ಯವನ್ನು ಸಹ ಹೊಂದಿದ್ದು, ಕಷ್ಟಕರವಾದ ರಸ್ತೆಗಳಲ್ಲಿ ಕೂಡ ಆರಾಮಾಗಿ ಪ್ರಯಾಣಿಸಬಹುದು. Audi Q3 ಸ್ಪೋರ್ಟ್‌ಬ್ಯಾಕ್, ಕಂಪನಿಯ SUV ಟಾಪ್ ಎಂಡ್ ರೂಪಾಂತರವಾಗಿದೆ. ಕಂಪನಿಯು Q3 ಸ್ಪೋರ್ಟ್‌ಬ್ಯಾಕ್ ಬೆಲೆಯನ್ನು 51.43 ಲಕ್ಷ ರೂಪಾಯಿಗೆ ನಿಗದಿಪಡಿಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಯಾದ ಆಡಿ ಕ್ಯೂ3 ಕಾರಿನ ಆರಂಭಿಕ ಬೆಲೆ 44.89 ಲಕ್ಷ ರೂಪಾಯಿ ಇತ್ತು.
ನೋಟ ಮತ್ತು ವೈಶಿಷ್ಟ್ಯ
ಆಡಿ Q3 ಸ್ಪೋರ್ಟ್‌ಬ್ಯಾಕ್ ಅದ್ಭುತವಾದ ವಿನ್ಯಾಸವನ್ನು ಹೊಂದಿದೆ. ಹೊಸ 5-ಸ್ಪೋಕ್ 18-ಇಂಚಿನ ಮಿಶ್ರಲೋಹದ ಚಕ್ರಗಳು ಮತ್ತು ಎಸ್-ಲೈನ್ ಹೊರಭಾಗದ ಪ್ಯಾಕೇಜ್ ಜೊತೆಗೆ ಕೂಪ್ ವಿನ್ಯಾಸವನ್ನು ಪಡೆಯುತ್ತದೆ. Q3 ಸ್ಪೋರ್ಟ್‌ಬ್ಯಾಕ್ ಐದು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ – ಟರ್ಬೊ ಬ್ಲೂ, ಗ್ಲೇಸಿಯರ್ ವೈಟ್, ಕ್ರೋನೋಸ್ ಗ್ರೇ, ಮೈಥೋಸ್ ಬ್ಲ್ಯಾಕ್ ಮತ್ತು ನವರ್ರಾ ಬ್ಲೂ.ಆಡಿ Q3 ಎಂಜಿನ್ ಅನ್ನು 7-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಇದು ಉತ್ತಮ ಸ್ಟೀರಿಂಗ್, ಆರಾಮದಾಯಕ ಸಸ್ಪೆನ್ಷನ್, ವೇಗ ಮಿತಿಯೊಂದಿಗೆ ಕ್ರೂಸ್ ನಿಯಂತ್ರಣವನ್ನು ಸಹ ಹೊಂದಿದೆ.
ಕೀಲಿ ರಹಿತ ಪ್ರವೇಶ, 30-ಬಣ್ಣದ ಆಂಬಿಯೆಂಟ್ ಲೈಟಿಂಗ್, ಪವರ್-ಹೊಂದಾಣಿಕೆಯ ಮುಂಭಾಗದ ಆಸನಗಳು, 10.1-ಇಂಚಿನ ಟಚ್‌ಸ್ಕ್ರೀನ್, ಎರಡು-ವಲಯ ಹವಾಮಾನ ನಿಯಂತ್ರಣ, ವೈರ್‌ಲೆಸ್ ಫೋನ್ ಚಾರ್ಜಿಂಗ್, 10 ಸ್ಪೀಕರ್‌ಗಳೊಂದಿಗೆ ಆಡಿ ಸೌಂಡ್ ಸಿಸ್ಟಮ್ ಮತ್ತು 6-ಚಾನೆಲ್ ಆಂಪ್ಲಿಫೈಯರ್ ಅನ್ನು ಸಹ ಇದು ಒಳಗೊಂಡಿದೆ. ಇನ್ನು ಸುರಕ್ಷತಾ ವೈಶಿಷ್ಟ್ಯಗಳನ್ನು ನೋಡೋದಾದ್ರೆ ಇದರಲ್ಲಿ 6 ಏರ್‌ಬ್ಯಾಗ್‌ಗಳಿವೆ. ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ISOFIX ಚೈಲ್ಡ್ ಸೀಟ್, ಆಂಟಿ-ಥೆಫ್ಟ್ ವೀಲ್ ಬೋಲ್ಟ್‌ಗಳು ಮತ್ತು ಸ್ಪೇಸ್ ಸೇವಿಂಗ್ ಸ್ಪೇರ್ ವೀಲ್ ಸೇರಿವೆ. ಕಂಪನಿಯು 2+3 ವರ್ಷಗಳ ವಿಸ್ತೃತ ವಾರಂಟಿ ಮತ್ತು 5 ವರ್ಷಗಳ ರೋಡ್ ಸೈಡ್ ಅಸಿಸ್ಟೆನ್ಸ್ ಅನ್ನು ಸೀಮಿತ ಅವಧಿಗೆ ನೀಡುತ್ತಿದೆ.