
ತಾವು ಮದುವೆಯಾಗಿರುವ ವಿಷಯವನ್ನು ಟ್ವಿಟರ್ನಲ್ಲಿ ಪ್ರಕಟಿಸಿದ ಅವರು, ನ್ಯಾಯಾಲಯದಲ್ಲಿ ವೈವಾಹಿಕ ಬಂಧನಕ್ಕೆ ಒಳಗಾಗಿರುವ ವಿವಾಹದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಇಬ್ಬರ ನಡುವಿನ ಆರಂಭದ ಕ್ಷಣಗಳಿಂದ ಹಿಡಿದು ಸ್ನೇಹ, ಪ್ರೀತಿಯ ಕ್ಷಣಗಳ ಸಂಯೋಜನೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
2023 ರ ಜನವರಿ 6 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಇಬ್ಬರೂ ನ್ಯಾಯಾಲಯದಲ್ಲಿ ವಿವಾಹವಾಗಿರುವುದಾಗಿ ಮಾಹಿತಿ ಹಂಚಿಕೊಂಡಿದ್ದು ಅಚ್ಚರಿ ಮೂಡಿಸಿದ್ದಾರೆ.
“ಕೆಲವೊಮ್ಮೆ ನಿಮ್ಮ ಪಕ್ಕದಲ್ಲೇ ಇರುವ ಯಾವುದನ್ನಾದರೂ ನೀವು ತುಂಬಾ ದೂರ ಮತ್ತು ವ್ಯಾಪಕವಾಗಿ ಹುಡುಕುತ್ತೀರಿ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು, ಆದರೆ ನಾವು ಮೊದಲು ಸ್ನೇಹವನ್ನು ಕಂಡುಕೊಂಡಿದ್ದೇವೆ. ಮತ್ತು ನಂತರ ನಾವು ಒಬ್ಬರನ್ನೊಬ್ಬರು ಕಂಡುಕೊಂಡೆವು….! ನನ್ನ ಹೃದಯಕ್ಕೆ ಸುಸ್ವಾಗತ ಫಹಾದ್ ಅಹಮದ್. ಇದು ಅಸ್ತವ್ಯಸ್ತವಾಗಿದೆ ಆದರೆ ಅದು ನಿಮ್ಮದೇ!”, ಎಂದು ಸ್ವರಾ ಭಾಸ್ಕರ್ ಅವರು ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.