ಮದುವೆ ಸಂದರ್ಭದಲ್ಲಿ ಒತ್ತಡಕ್ಕೊಳಗಾಗುವುದು ಸಾಮಾನ್ಯ. ಅದ್ರಲ್ಲೂ ವಧು-ವರರು ಹೆಚ್ಚು ಒತ್ತಡ, ಆತಂಕಕ್ಕೊಳಗಾಗ್ತಾರೆ. ಮದುವೆಗೆ ಮುನ್ನ ಎಷ್ಟು ತಯಾರಿ ನಡೆಸಿದ್ರೂ ಕೆಲವೊಂದು ವಿಷ್ಯಗಳು ಮರೆತು ಹೋಗ್ತವೆ. ಮದುವೆ ದಿನ ರಾತ್ರಿ ವಧು-ವರ ಮತ್ತಷ್ಟು ಹತ್ತಿರವಾಗ್ತಾರೆ.
ಯಾವುದೇ ಮಹಿಳೆಯನ್ನು ತುಂಬಾ ಹತ್ತಿರದಿಂದ ನೋಡಿರದ ಪುರುಷ ಫಸ್ಟ್ ನೈಟ್ ನಲ್ಲಿ ಮಹಿಳೆಯಷ್ಟೇ ಆತಂಕ, ಭಯ, ಒತ್ತಡಕ್ಕೊಳಗಾಗ್ತಾನೆ.
ಮೊದಲ ರಾತ್ರಿ ಶಾರೀರಿಕ ಸಂಬಂಧ ಬೆಳೆಸಬೇಕೆಂಬ ನಿಯಮವೇನಿಲ್ಲ. ನಿಮಗೆ ಆಸಕ್ತಿಯಿದ್ದು, ಸಂಗಾತಿ ಇದಕ್ಕೆ ಸಿದ್ಧವಿಲ್ಲವಾದ್ರೆ ಒತ್ತಾಯ ಮಾಡುವ ಅಗತ್ಯವಿಲ್ಲ. ಇಬ್ಬರ ಒಪ್ಪಿಗೆ ಇದ್ದು ಒಂದಾದಲ್ಲಿ ಮಾತ್ರ ದಾಂಪತ್ಯ ಸುಖ ಎಂಬುದು ನೆನಪಿರಲಿ.
ವೈಯಕ್ತಿಕ ನೈರ್ಮಲ್ಯ ಹಾಗೂ ಸ್ವಚ್ಛತೆ ಬಹಳ ಮುಖ್ಯ. ಅನೇಕ ಪುರುಷರು ಇದಕ್ಕೆ ಮಹತ್ವ ನೀಡುವುದಿಲ್ಲ. ಆದ್ರೆ ಫಸ್ಟ್ ನೈಟ್ ವೇಳೆ ನೀವೂ ಈ ತಪ್ಪು ಮಾಡಬೇಡಿ. ವೈಯಕ್ತಿಕ ನೈರ್ಮಲ್ಯಕ್ಕೆ ಒತ್ತು ನೀಡಿ. ಪುರುಷನ ಸೌಂದರ್ಯಕ್ಕಿಂತ ಸ್ವಚ್ಛತೆಗೆ ಮಹಿಳೆ ಮಾರು ಹೋಗ್ತಾಳೆ ಎಂಬುದನ್ನು ಸಮೀಕ್ಷೆ ಹೇಳಿದೆ.
ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಮೊದಲೇ ಕ್ಲೈಮ್ಯಾಕ್ಸ್ ತಲುಪುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕೆ ಮುಜುಗರಪಟ್ಟುಕೊಳ್ಳುವ ಅಗತ್ಯವಿಲ್ಲ.
ಮೊದಲ ಸಂಭೋಗದಲ್ಲಿಯೇ ಸಂಗಾತಿ ಪರಾಕಾಷ್ಠೆ ತಲುಪಿಲ್ಲವಾದ್ರೆ ಎಂಬ ಆತಂಕ ಬೇಡ. ಇದಕ್ಕೆ ನೀವು ಹೊಣೆಯಾಗುವುದಿಲ್ಲ. ಮಹಿಳೆ ಯಾವಾಗ ಪರಾಕಾಷ್ಠೆ ತಲುಪುತ್ತಾಳೆಂಬುದನ್ನು ಹೇಳುವುದು ಕಷ್ಟ.
ಸಿನಿಮಾ ಬೇರೆ, ಜೀವನ ಬೇರೆ ಎಂಬುದು ನೆನಪಿರಲಿ. ಸಿನಿಮಾದಂತೆ ಮೊದಲ ರಾತ್ರಿ ಅದ್ಭುತವಾಗಿರಬೇಕೆಂದೇನಿಲ್ಲ. ಮದುವೆ ಕೆಲಸದಲ್ಲಿ ಇಬ್ಬರಿಗೂ ಸುಸ್ತಾಗಿರುತ್ತದೆ. ಇಬ್ಬರಿಗೂ ನಿದ್ರೆ ಅಗತ್ಯ ಎನ್ನಿಸಿದ್ರೆ ನಿದ್ರೆ ಮಾಡಬಹುದು.