ಮಧ್ಯಪ್ರದೇಶ : ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಮುಂಗೋಲಿ ಗ್ರಾಮದಲ್ಲಿ 300 ಅಡಿ ಆಳದ ಕೊಳವೆ ಬಾವಿಗೆ (borewell) ಬಿದ್ದಿದ್ದ ಎರಡೂವರೆ ವರ್ಷದ ಮಗುವನ್ನು ರಕ್ಷಣೆ ಮಾಡಲಾಗಿದೆ.
ಪೊಲೀಸ್ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (Disaster Management Force) ಕಾರ್ಯಾಚರಣೆ ನಡೆಸಿ ಸೃಷ್ಟಿ ಎಂಬ ಬಾಲಕಿಯನ್ನು ರಕ್ಷಿಸಿದ್ದಾರೆ. ಸದ್ಯ ಮಗು ಅರೆಪ್ರಜ್ಞಾ ಸ್ಥಿತಿಯಲ್ಲಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೆಸಿಬಿ ಯಂತ್ರಗಳ ನೆರವಿನಿಂದ 300 ಅಡಿ ಆಳದ ಬಾವಿಯಿಂದ ಮಗುವನ್ನು ಹೊರ ತರುವ ಕಾರ್ಯ ಆರಂಭಿಸಲಾಗಿತ್ತು. ಸತತ ಕಾರ್ಯಾಚರಣೆ (operation) ನಡೆಸಿದ ಸಿಬ್ಬಂದಿಗಳು ಸುರಕ್ಷಿತವಾಗಿ ಮಗುವನ್ನು ಹೊರಕ್ಕೆ ಕರೆ ತಂದಿದ್ದಾರೆ. ಮಗು ಬದುಕಿ ಬರಲೆಂದು ಪೋಷಕರು, ಗ್ರಾಮದ ಜನರು ಸತತ ಪ್ರಾರ್ಥನೆ ಮಾಡುತ್ತಿದ್ದರು. ಅಂತೂ ಮಗುವನ್ನು ಸುರಕ್ಷಿತವಾಗಿ ಬೋರ್ ವೆಲ್ ನಿಂದ ಮೇಲಕ್ಕೆತ್ತಲಾಗಿದೆ.