ಫಲಿತಾಂಶದ ಬಗ್ಗೆ ಅನುಮಾನವಿದ್ದರೆ ಸ್ಕ್ಯಾನ್ ಕಾಪಿ ಪಡೆಯಬಹುದು. ಸ್ಕ್ಯಾನ್ ಕಾಪಿ ಪಡೆಯಲು ಇಂದಿನಿಂದ ಜೂನ್ 30ವರೆಗೆ ಅವಕಾಶವಿದೆ. ಪ್ರತಿ ವಿಷಯದ ಸ್ಕ್ಯಾನ್ ಕಾಪಿಗೆ 530 ರೂ ಶುಲ್ಕ ವಿರುತ್ತದೆ ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಈ ಬಾರಿಯ ಫಲಿತಾಂಶದಲ್ಲಿ 91106 ವಿದ್ಯಾರ್ಥಿಗಳು ಡಿಸ್ಟ್ರಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ. ಗಣಿತದಲ್ಲಿ 14,200 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಗಳಿಸಿದ್ದಾರೆ. ಇಂಗ್ಲೀಷ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ಕನ್ನಡದಲ್ಲಿ 563 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಇಬ್ಬರು ಟಾಪರ್ ಆಗಿದ್ದು, ಶ್ವೇತಾ ಬೀಮಶಂಕರ ಬೈರಗೊಂಡ 600ಕ್ಕೆ 594 ಅಂಕ ಪಡೆದಿದ್ದು, ಸಾಹನಾ ಮಡಿವಾಳರ್ 594 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಜೈನ್ ಪಿಯು ಕಾಲೇಜು ವಿದ್ಯಾರ್ಥಿ ಮಾನವ್ ವಿನಯ ಕೇಜ್ರಿವಾಲ್ 596 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಸೈನ್ಸ್ ವಿಭಾಗದಲ್ಲಿ ಸಿಮ್ರಾನ್ ಶೇಷಾರ್ 600ಕ್ಕೆ 598 ಅಂಕಗಳಿಸಿದ್ದರೆ, ಮೊಹಮ್ಮದ್ ರಫೀಕ್ 598 ಅಂಕ, ಸಾಯಿ ಚಿರಾಗ್ 598 ಅಂಕ ಪಡೆದಿದ್ದಾರೆ.