ಬೇಕಾಗುವ ಸಾಮಾಗ್ರಿಗಳು:
ಗೋಧಿ ಹಿಟ್ಟು – 1 ಕಪ್, ತುಪ್ಪ – 1 ಕಪ್, ಸಕ್ಕರೆ – 1 ಕಪ್, ಹಾಲು – 1 ಕಪ್, ನೀರು – ಅರ್ಧ ಕಪ್, ಏಲಕ್ಕಿ- ಸ್ವಲ್ಪ, ದ್ರಾಕ್ಷಿ, ಗೋಡಂಬಿ
ಮಾಡುವ ವಿಧಾನ:
ಮೊದಲಿಗೆ ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಅದಕ್ಕೆ ಗೋಧಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಬೇಕು. ಕಂದು ಬಣ್ಣಕ್ಕೆ ಬಂದಾಗ ಸಕ್ಕರೆ ಹಾಕಬೇಕು. ಜತಗೆ ಸ್ವಲ್ಪ ಸ್ವಲ್ಪವೇ ಹಾಲು ಹಾಕಿ ನಿಧಾನಕ್ಕೆ ಮಿಕ್ಸ್ ಮಾಡಬೇಕು. ನಂತರ ಸ್ವಲ್ಪ ನೀರು ಹಾಕಬೇಕು, ನಂತರ ಚೆನ್ನಾಗಿ ಮಿಕ್ಸ್ ಮಾಡಬೇಕು.
ಹಲ್ವಾ ತಳ ಬಿಟ್ಟಾಗ ಏಲಕ್ಕಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಕಿ ಸರ್ವಿಂಗ್ ಪ್ಲೇಟ್ ಗೆ ಹಾಕಿದರೆ ಸವಿಯಲು ರುಚಿಯಾದ ಗೋಧಿ ಹಲ್ವಾ ಸಿದ್ಧ.