
ತಾಜಾ ಹಣ್ಣುಗಳನ್ನು ನಮ್ಮ ಆರೋಗ್ಯಕ್ಕೆ ಉತ್ತಮ ಸ್ನೇಹಿತರಿದ್ದಂತೆ. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ಹಣ್ಣುಗಳಲ್ಲಿರುತ್ತವೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ಹಣ್ಣುಗಳನ್ನು ಸಹ ಸೇವಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಬೊಜ್ಜು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಇದರಿಂದ ಕೊಲೆಸ್ಟ್ರಾಲ್, ಅಧಿಕ ಬಿಪಿ, ಮಧುಮೇಹ, ಹೃದಯಾಘಾತ ಸೇರಿದಂತೆ ಹಲವು ರೋಗಗಳನ್ನು ಎದುರಿಸಬೇಕಾಗಿದೆ.ಕೆಲವು ನಿರ್ದಿಷ್ಟ ಹಣ್ಣುಗಳ ಸೇವನೆಯಿಂದ ಬಹಳ ಬೇಗ ತೂಕ ಕಡಿಮೆ ಮಾಡಿಕೊಳ್ಳಬಹುದು. ಅವು ಯಾವುವು ಅನ್ನೋದನ್ನು ನೋಡೋಣ.
ಸೇಬು: ದಿನನಿತ್ಯ ಸೇಬು ತಿನ್ನುವುದರಿಂದ ವೈದ್ಯರ ಬಳಿ ಹೋಗುವ ಅಗತ್ಯವಿಲ್ಲ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ, ಪಾಲಿಫಿನಾಲ್ಗಳು ಈ ಹಣ್ಣಿನಲ್ಲಿ ಕಂಡುಬರುತ್ತವೆ, ಇದು ತೂಕವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ದಿನನಿತ್ಯದ ಆಹಾರದಲ್ಲಿ ಸೇಬನ್ನು ಸೇರಿಸಿಕೊಳ್ಳಬೇಕು. ಬಯಸಿದರೆ ಸೇಬಿನ ರಸವನ್ನು ಸಹ ಕುಡಿಯಬಹುದು.
ಕಿವಿ: ಕಿವಿ ಹಣ್ಣನ್ನು ಎಲ್ಲರೂ ಸೇವನೆ ಮಾಡಲೇಬೇಕು. ಇದು ಆರೋಗ್ಯಕ್ಕೆ ಹೇಳಿಮಾಡಿಸಿದಂತಿದೆ. ವಿಟಮಿನ್ ಸಿ, ವಿಟಮಿನ್ ಇ, ಫೋಲೇಟ್ ಮತ್ತು ಫೈಬರ್ ಈ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುತ್ತವೆ, ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
ಕಿತ್ತಳೆ: ತೂಕ ಇಳಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ ಕಿತ್ತಳೆ ಹಣ್ಣಿನ ಸ್ನೇಹ ಮಾಡಿ. ಈ ಹಣ್ಣನ್ನು ಅಥವಾ ಅದರ ಜ್ಯೂಸ್ ಅನ್ನು ಪ್ರತಿದಿನ ಸೇವಿಸಿದರೆ ತೂಕವನ್ನು ಕಳೆದುಕೊಳ್ಳುವುದು ಸುಲಭವಾಗುತ್ತದೆ. ಆದಾಗ್ಯೂ ಫೈಬರ್ ಹೊಂದಿರುವ ಹಣ್ಣುಗಳನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ.
ಪಪ್ಪಾಯ: ಪಪ್ಪಾಯ ತೂಕವನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ. ಏಕೆಂದರೆ ಅದರ ಪೌಷ್ಟಿಕಾಂಶದ ಮೌಲ್ಯವು ತುಂಬಾ ಹೆಚ್ಚಾಗಿರುತ್ತದೆ. ಇದರಲ್ಲಿ ಗ್ಯಾಲಿಕ್ ಆಮ್ಲವಿದ್ದು ಇದು ಬೊಜ್ಜಿನ ಶತ್ರು. ಪಪ್ಪಾಯವನ್ನು ಕತ್ತರಿಸಿ ತಿನ್ನಬಹುದು ಅಥವಾ ಜ್ಯೂಸ್ ಮಾಡಿಕೊಂಡು ಕೂಡ ಕುಡಿಯಬಹುದು. ಪಪ್ಪಾಯ ಜೀರ್ಣಕ್ರಿಯೆಗೂ ಒಳ್ಳೆಯದು.