ದಿನಾ ಬೆಳಗ್ಗೆ ಏನ್ ತಿಂಡಿ ಮಾಡೋದು ಎಂಬುವುದು ಬಹುತೇಕ ಗೃಹಿಣಿಯರಿಗೆ ತಲೆನೋವಿನ ವಿಷಯ. ದೋಸೆ ಮಾಡೋದಾದ್ರೆ ತಲೆ ಬಿಸಿ ಸ್ವಲ್ಪ ಕಡಿಮೆ. ಹಾಗಂತ ಅಕ್ಕಿ ದೋಸೆನೇ ತಯಾರಿಸಬೇಕು ಅಂತಿಲ್ಲಾ.
ಅಕ್ಕಿ ಹಿಟ್ಟು ರೆಡಿ ಇಲ್ಲದಿದ್ರೆ ಗೋಧಿ ದೋಸೆ ಟ್ರೈ ಮಾಡಿ. ಇಲ್ಲಿದೆ ಅದನ್ನು ತಯಾರಿಸುವ ವಿಧಾನ.
ಬೇಕಾಗುವ ಸಾಮಾಗ್ರಿಗಳು
ಗೋಧಿ ಹಿಟ್ಟು – 1/2 ಕಪ್
ಅಕ್ಕಿ ಹಿಟ್ಟು – 1/2 ಕಪ್
ರವೆ – 2 ಚಮಚ
ಮೊಸರು – 1 ಚಮಚ
ನೀರು – 2 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1/2
ಶುಂಠಿ – ಸ್ವಲ್ವ
ಮೆಣಸಿನ ಕಾಯಿ – 1
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಕರಿಬೇವು – 2 ಚಮಚ
ಜೀರಿಗೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಗೋಧಿ ಹಿಟ್ಟು, ಅಕ್ಕಿಹಿಟ್ಟು, ರವೆ, ಮೊಸರು, ನೀರು ಹಾಕಿ ಕಲಸಿಕೊಳ್ಳಬೇಕು. ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿರುವ ಅರ್ಧ ಈರುಳ್ಳಿ, ಸ್ವಲ್ಪ ಶುಂಠಿ, ಮೆಣಸಿನ ಕಾಯಿ, ಸಣ್ಣಗೆ ಹೆಚ್ಚಿರುವ 2 ಚಮಚ ಕೊತ್ತಂಬರಿ ಮತ್ತು ಕರಿಬೇವು ,1 ಚಮಚ ಜೀರಿಗೆ, ಉಪ್ಪು ಸೇರಿಸಿ ಕಲಸಿ 20 ನಿಮಿಷ ಹಾಗೆ ಬಿಡಬೇಕು. ಬೇಕಾದರೆ ಸರಿ ಹೋಗುವಷ್ಟು ನೀರು ಸೇರಿಸಬಹುದು.
ನಂತರ ಕಾದ ಕಾವಲಿ ಮೇಲೆ ದೋಸೆ ಹುಯ್ಯಿರಿ. ಈಗ ರುಚಿ ರುಚಿಯಾದ ಸುಲಭವಾಗಿ ಮಾಡುವ ಗೋಧಿ ದೋಸೆ ರೆಡಿ ಟು ಈಟ್.