ಸಂಪಿಗೆ ಅಂದ್ರೆ ಎಲ್ಲರೂ ಹೂವಿನ ಬಗ್ಗೆ ಹೇಳ್ತಾರೆ. ಆದ್ರೆ ನಾವು ಹೇಳ್ತಿರೋದು ಸ್ವೀಟ್ ಬಗ್ಗೆ. ಫಟಾಫಟ್ ಅಂತಾ 10 ನಿಮಿಷದಲ್ಲೇ ತಯಾರಾಗೋ ಈ ಸ್ವೀಟ್ ತಿನ್ನಲು ಸಿಹಿ, ನೋಡಲು ಖುಷಿಯಾಗುತ್ತೆ.
ಸಂಪಿಗೆ ಸ್ವೀಟ್ ಮಾಡಲು ಬೇಕಾಗುವ ಪದಾರ್ಥಗಳು
ಮೈದಾ ಹಿಟ್ಟು : 1/4 ಕೆ.ಜಿ
ಸಕ್ಕರೆ : ಒಂದು ಬಟ್ಟಲು
ಎಣ್ಣೆ : ¼ ಲೀಟರ್
ಏಲಕ್ಕಿ : 3 ರಿಂದ 4
ಮಾಡುವ ವಿಧಾನ :
ಮೈದಾಹಿಟ್ಟಿಗೆ ಚಿಟಿಕೆ ಉಪ್ಪು ಸೇರಿಸಿ ಚಪಾತಿ ಹದಕ್ಕೆ ಕಲಸಿ 10 ನಿಮಿಷ ಮುಚ್ಚಿಡಿ. ನಂತರ ಸಕ್ಕರೆಗೆ ಮೂರ್ನಾಲ್ಕು ಏಲಕ್ಕಿ ಸೇರಿಸಿ ಮಿಕ್ಸಿ ಮಾಡಿಕೊಳ್ಳಿ. ಇದಾದ ಬಳಿಕ ಕಲಸಿದ ಮೈದಾಹಿಟ್ಟನ್ನು ಪೂರಿ ಆಕಾರದಲ್ಲಿ ಚಿಕ್ಕದಾಗಿ ಮತ್ತು ತೆಳುವಾಗಿ ಲಟ್ಟಿಸಿಕೊಳ್ಳಬೇಕು.
ನಂತರ ಚಾಕುವಿನಲ್ಲಿ ಉದ್ದುದ್ದ ಕತ್ತರಿಸಿ ರೋಲ್ ಮಾಡಿ, ಬಾಣಲೆಯಲ್ಲಿ ಕಾದಿದ್ದ ಎಣ್ಣೆಯಲ್ಲಿ ಹಾಕಿ ಕರಿಯಬೇಕು. ನಂತರ ಚೆನ್ನಾಗಿ ಕರಿದು ಬಾಣಲೆಯಿಂದ ಹೊರ ತೆಗೆದ ಬಳಿಕ, ಮಾಡಿಟ್ಟುಕೊಂಡಿದ್ದ ಸಕ್ಕರೆ ಪುಡಿಯನ್ನು ಅವುಗಳ ಮೇಲೆ ಉದುರಿಸಬೇಕು. ರುಚಿಯಾದ, ಗರಿ ಗರಿಯಾದ ಸಂಪಿಗೆ ಸ್ವೀಟ್ ಈಗ ತಿನ್ನಲು ಸಿದ್ಧ.