ಬಟರ್ ಚಿಕನ್ ಮಾಡಿಕೊಂಡು ತಿನ್ನಬೇಕು ಅನಿಸುತ್ತೆ. ಆದರೆ ಅದನ್ನು ಮಾಡುವುದಕ್ಕ ತುಂಬಾ ಸಮಯ ಬೇಕು ಎಂದು ಸುಮ್ಮನಾಗುತ್ತೇವೆ. ಇಲ್ಲಿ ಸುಲಭವಾಗಿ ಬಟರ್ ಚಿಕನ್ ಮಾಡುವ ವಿಧಾನವಿದೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
250 ಗ್ರಾಂ ಬೋನ್ ಲೆಸ್ ಚಿಕನ್, ½ ಕಪ್ ಮೊಸರು, 1 ಟೀ ಸ್ಪೂನ್ ಅರಿಶಿನ, 1 ಟೀ ಸ್ಪೂನ್ ಉಪ್ಪು. 2 ಟೇಬಲ್ ಸ್ಪೂನ್- ಬೆಣ್ಣೆ, 4- ಲವಂಗ, 4- ಏಲಕ್ಕಿ, 1 ಇಂಚು- ಚಕ್ಕೆ, ½ ಕಪ್ – ಕತ್ತರಿಸಿದ ಈರುಳ್ಳಿ, ½ ಟೀ ಸ್ಪೂನ್- ಖಾರದಪುಡಿ, 1 ಟೇಬಲ್ ಸ್ಪೂನ್- ಶುಂಠಿ ತುರಿ, 5 ಟೇಬಲ್ ಸ್ಪೂನ್- ಟೊಮೆಟೊ ಪ್ಯೂರಿ, 150 ಎಂ ಎಲ್- ಕ್ರೀಂ, 1 ಟೇಬಲ್ ಸ್ಪೂನ್- ಕಸೂರಿ ಮೇಥಿ, 1 ಟೀ ಸ್ಪೂನ್ – ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು.
ಸೂಪರ್ ಹೀರೋ: ದೆಹಲಿಯ ‘ಮಟ್ಕಾ ಮ್ಯಾನ್’ಗೆ ಉದ್ಯಮಿ ಆನಂದ್ ಮಹೀಂದ್ರ ಶ್ಲಾಘನೆ
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ಗೆ ಎಗ್ ಲೆಸ್ ಚಿಕನ್, ಮೊಸರು, ಅರಿಶಿನ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 20 ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿಡಿ. ನಂತರ ಹೊರತಗೆದು ಇಡಿ.
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದು ಬಿಸಿಯಾಗುತ್ತಲೆ ಬೆಣ್ಣೆ ಹಾಕಿ ನಂತರ ಚಕ್ಕೆ, ಏಲಕ್ಕಿ, ಲವಂಗ ಸೇರಿಸಿ. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಕೈಯಾಡಿಸಿ. ಈರುಳ್ಳಿ ಕಂದು ಬಣ್ಣಕ್ಕೆ ಬಂದ ಕೂಡಲೆ ಅದಕ್ಕೆ ಖಾರದ ಪುಡಿ, ಶುಂಠಿ, ಹಾಕಿ ಸ್ವಲ್ಪ ಹೊತ್ತು ಕೈಯಾಡಿಸಿ. ನಂತರ ಟೊಮೆಟೊ ಪ್ಯೂರಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ಸುರಕ್ಷಿತ ಸರ್ಕಾರಿ ಹೂಡಿಕೆ ಯೋಜನೆ ’ಪಿಪಿಎಫ್ʼ ಖಾತೆ ತೆರೆಯಲು ಇಲ್ಲಿದೆ ಟಿಪ್ಸ್
ನಂತರ ಚಿಕನ್ ಸೇರಿಸಿ ½ ಕಪ್ ನೀರು ಸೇರಿಸಿ ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಕ್ರೀಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಆಮೇಲೆ ಕಸೂರಿ ಮೇಥಿ, ಗರಂ ಮಸಾಲ, ಉಪ್ಪು ಹಾಕಿ 2 ನಿಮಿಷಗಳ ಕಾಲ ಕುದಿಸಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.