ಈಗೆಲ್ಲ ಪ್ಲಾಸ್ಟಿಕ್ ಬಾಟಲ್ನದ್ದೇ ಕಾರುಬಾರು, ಎಲ್ಲಿಗೆ ಹೊರಟರೂ ಬಾಟಲ್ ನಲ್ಲೇ ನೀರು ಕೊಂಡೊಯುತ್ತೇವೆ, ಪ್ಲಾಸ್ಟಿಕ್ ಬಾಟಲ್ ಗಳು ಆಕರ್ಷಕವಾಗಿ ಕಾಣುವುದರಿಂದ ಅದರಲ್ಲೇ ನೀರು ಕುಡಿಯಲು ಹೆಚ್ಚಿನ ಜನ ಬಯಸುತ್ತಾರೆ. ಅದರಲ್ಲೂ ಮಕ್ಕಳು ಅದನ್ನೇ ಇಷ್ಟಪಡುತ್ತಾರೆ. ಆದರೆ ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಸೂರ್ಯನ ಬಿಸಿಲಿಗೆ ಪ್ಲಾಸ್ಟಿಕ್ ಬಾಟಲ್ ಒಡ್ಡಿಕೊಂಡಾಗ ಡಯಾಕ್ಸಿನ್ ಎಂಬ ವಿಷ ಬಿಡುಗಡೆಯಾಗುತ್ತದೆ. ಈ ನೀರನ್ನು ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚು.
SHOCKING: ಮಾರುಕಟ್ಟೆಯಲ್ಲೇ ಯುವತಿಯರು ಸೇರಿ ನಾಲ್ವರು ಮಹಿಳೆಯರ ಬೆತ್ತಲೆ ಮೆರವಣಿಗೆ, ಕಳವು ಆರೋಪದ ಮೇಲೆ ಹಲ್ಲೆ
ದಿನನಿತ್ಯ ಪ್ಲಾಸ್ಟಿಕ್ ಬಾಟಲ್ ನೀರು ಕುಡಿಯುವುದರಿಂದ ಮಧುಮೇಹ, ಸ್ಥೂಲಕಾಯತೆ, ಫಲವತ್ತತೆಯ ಸಮಸ್ಯೆ ಕಂಡು ಬರುವುದುಂಟು. ಹೀಗಾಗಿ ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿಯುವುದು ಮಾತ್ರವಲ್ಲ ಸಂಗ್ರಹಿಸಿಡುವ ತಪ್ಪನ್ನೂ ಮಾಡದಿರಿ. ಇದರಿಂದ ಹಲವು ರಾಸಾಯನಿಕಗಳು ದೇಹವನ್ನು ಸೇರುತ್ತವೆ.
ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಲಿವರ್ ಕ್ಯಾನ್ಸರ್, ವೀರ್ಯಾಣು ಕೊರತೆ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.