ಇಂದಿನ ಆಧುನಿಕ ಜೀವನಶೈಲಿಯಲ್ಲಿ ಉಳಿದ ಆಹಾರವನ್ನು ಫ್ರಿಡ್ಜ್‌ನಲ್ಲಿ ಇಡುವುದು ಸಾಮಾನ್ಯ ಅಭ್ಯಾಸವಾಗಿದೆ. ಕಚೇರಿಗೆ ಹೋಗುವವರು ಮರುದಿನ ಅನುಕೂಲವಾಗುವಂತೆ ಹೆಚ್ಚುವರಿ ಆಹಾರವನ್ನು ತಯಾರಿಸುತ್ತಾರೆ. ಆದರೆ ಉಳಿದ ಆಹಾರವನ್ನು ನಾವು ಫ್ರಿಡ್ಜ್‌ನಲ್ಲಿ ಹೇಗೆ ಸಂಗ್ರಹಿಸುತ್ತೇವೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಪ್ಲಾಸ್ಟಿಕ್ ಡಬ್ಬಗಳಲ್ಲಿ ತಿನಿಸುಗಳನ್ನು ಇಡಲಾಗುತ್ತದೆ. ಆದರೆ ಇದು ಎಷ್ಟು ಸುರಕ್ಷಿತ ಎಂಬ ಆತಂಕ ಕಾಡಬಹುದು. ಪ್ಲಾಸ್ಟಿಕ್ ನಾವು ಆರಾಮವಾಗಿ ಬಳಸುವಂತಹ ವಸ್ತುವಾಗಿದೆ ಮತ್ತು ಅದು ಒಡೆದು ಹೋಗಬಹುದು ಎಂಬ ಭಯವಿಲ್ಲ.
ಪ್ಲಾಸ್ಟಿಕ್ ಪಾತ್ರೆಗಳು ಫ್ರಿಡ್ಜ್‌ನಲ್ಲಿಡಲು ಸುರಕ್ಷಿತವೇ?
ಪ್ಲಾಸ್ಟಿಕ್ ಪಾತ್ರೆಗಳು ಅಥವಾ ಡಬ್ಬಗಳ ಬಳಕೆ ಆರೋಗ್ಯಕ್ಕೆ ಸೂಕ್ತವಲ್ಲ. ಆದರೆ ಫ್ರಿಡ್ಜ್‌ನಲ್ಲಿ ಆಹಾರಗಳನ್ನು ಸಂಗ್ರಹಿಸಿ ಇಡಲು ಬಳಸಬಹದು. ಬಿಸಿಯಾದ ವಸ್ತುಗಳನ್ನು ಪ್ಲಾಸ್ಟಿಕ್‌ನಲ್ಲಿ ಹಾಕಬಾರದು. ಶೈತ್ಯೀಕರಣ ಮಾಡುವುದು ಕೂಡ ಸೂಕ್ತವಲ್ಲ. ಪ್ಲಾಸ್ಟಿಕ್ ಅನ್ನು ಮೈಕ್ರೋವೇವ್ ಮತ್ತು ಓವನ್ ಸೇಫ್ಟಿ ಎಂದೂ ಪರಿಗಣಿಸಲಾಗುತ್ತದೆ. ಪ್ಲಾಸ್ಟಿಕ್ ಪಾತ್ರೆಯಲ್ಲಿ ಆಹಾರವನ್ನು ಪ್ಯಾಕ್ ಮಾಡುವ ಬದಲು ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಪಾಲಿಥಿಲೀನ್ ಟೆರೆಫ್ತಾಲೇಟ್ ಪ್ಲಾಸ್ಟಿಕ್ ಕಂಟೈನರ್‌ಗಳು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಪ್ಲಾಸ್ಟಿಕ್ ಪಾತ್ರೆಯನ್ನು ನೀರಿನಿಂದ ಸ್ವಚ್ಛಗೊಳಿಸಿದ ನಂತರ ಎರಡು ಬಾರಿ ಬಳಸಬಹುದು. ಆದರೆ ಇದನ್ನು ಪದೇ ಪದೇ ತೊಳೆಯುವುದರಿಂದ ಅದರಲ್ಲಿ ಕಂಡುಬರುವ ರಾಸಾಯನಿಕಗಳು ಆಹಾರ ಅಥವಾ ನೀರಿನಲ್ಲಿ ಮಿಶ್ರಣವಾಗುತ್ತವೆ.
ಜೈವಿಕ ಪ್ಲಾಸ್ಟಿಕ್ ಬಳಸಿ
ಉಳಿದ ಆಹಾರವನ್ನು ಸಂಗ್ರಹಿಸಲು ಜೈವಿಕ ಪ್ಲಾಸ್ಟಿಕ್ ಬಳಸಿ. ಪ್ಲಾಸ್ಟಿಕ್ ಕಪ್‌ಗಳು, ಪ್ಲೇಟ್‌ಗಳನ್ನು ತಯಾರಿಸಲು ಜೈವಿಕ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತದೆ. ಜೋಳ, ಆಲೂಗಡ್ಡೆ, ಕಬ್ಬು ಬಳಸಿ ಪ್ಲಾಸ್ಟಿಕ್ ಪಾತ್ರೆಗಳನ್ನು ತಯಾರಿಸಲಾಗುತ್ತದೆ.