ಅವಕಾಡೊ ಹಣ್ಣಿನಿಂದ ಕೇವಲ ಜ್ಯೂಸ್ ಅಷ್ಟೇ ಅಲ್ಲ, ವೆರೈಟಿ ವೆರೈಟಿ ಡಿಶ್ ಗಳನ್ನು ಮಾಡಿ ಸವಿಯಬಹುದು. ಪೌಷ್ಟಿಕಾಂಶ ಭರಿತ ಈ ಹಣ್ಣಿನ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಿಂದ ರುಚಿ ರುಚಿಯಾದ ಪರೋಟ ಕೂಡ ತಯಾರಿಸಬಹುದು.
ಹಾಗಾದರೆ ಸುಲಭವಾಗಿ ಅವಕಾಡೊ ಪರೋಟ ಹೇಗೆ ಮಾಡಬಹುದು ಅಂತ ತಿಳಿಯಿರಿ.
ಬೇಕಾಗುವ ಸಾಮಾಗ್ರಿಗಳು
ಅವಕಾಡೊ ಹಣ್ಣು – 2
ಗೋಧಿಹಿಟ್ಟು – 2 ಕಪ್
ಆಲೂಗಡ್ಡೆ ತುರಿ – 1 ಕಪ್
ಜೀರಿಗೆ – 1/2 ಚಮಚ
ಖಾರ ಪುಡಿ – 1/2 ಚಮಚ
ಗರಂ ಮಸಾಲಾ ಪುಡಿ – 1/4 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ತುಪ್ಪ – 10 ಚಮಚ
ಮಾಡುವ ವಿಧಾನ
ಸಿಪ್ಪೆ ಹಾಗೂ ಬೀಜ ತೆಗೆದು ಚೆನ್ನಾಗಿ ಸ್ಮ್ಯಾಶ್ ಮಾಡಿದ ಅವಕಾಡೊ ಹಣ್ಣಿಗೆ ಗೋಧಿಹಿಟ್ಟು, ಆಲೂಗಡ್ಡೆ ತುರಿ, ಜೀರಿಗೆ, ಖಾರ ಪುಡಿ, ಗರಂ ಮಸಾಲಾ ಪುಡಿ, ಉಪ್ಪು ಮತ್ತು 1 ಚಮಚ ಎಣ್ಣೆ ಹಾಕಿ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
ಅರ್ಧ ಗಂಟೆಯ ನಂತರ ಸಾಧಾರಣ ಚಪಾತಿಯಂತೆ ಲಟ್ಟಿಸಿ ಕಾದ ಕಾವಲಿಯ ಮೇಲೆ ಎರಡೂ ಕಡೆ ತುಪ್ಪ ಹಾಕಿ ಬೇಯಿಸಿಕೊಳ್ಳಬೇಕು. ಈಗ ರುಚಿ ರುಚಿಯಾದ ಅವಕಾಡೊ ಪರೋಟ ತಿನ್ನಲು ರೆಡಿ.