ವಾಲೆಂಟೈನ್ಸ್ ವೀಕ್ ಶುರುವಾಗಿದೆ. ರೋಸ್ ಡೇ ಆಚರಿಸಿದ ನಂತ್ರ ಪ್ರೇಮಿಗಳು ಈಗ ಪ್ರಪೋಸ್ ಡೇ ಆಚರಿಸುತ್ತಿದ್ದಾರೆ. ಪ್ರೀತಿ ಕುರುಡು ಎನ್ನುವ ಮಾತಿದೆ. ವಯಸ್ಸು, ಜಾತಿ, ಸೌಂದರ್ಯವನ್ನು ಅದು ನೋಡುವುದಿಲ್ಲ.
ಆದ್ರೆ ಮನಸ್ಸಿನಲ್ಲಿ ಚಿಗುರಿದ ಪ್ರೀತಿಯನ್ನು ಪ್ರೀತಿಸಿದವರ ಮುಂದೆ ಹೇಳುವುದು ಸುಲಭವಲ್ಲ. ಸಂಗಾತಿ ನಮ್ಮನ್ನು ಮೆಚ್ಚಿಕೊಳ್ಳಲು ನಾವು ಪ್ರೇಮ ನಿವೇದನೆ ಮಾಡುವ ವಿಧಾನ ಕೂಡ ಮಹತ್ವ ಪಡೆಯುತ್ತದೆ.
ಪ್ರೀತಿಯಲ್ಲಿ ಬಿದ್ದಿರುವ ನೀವು ಪ್ರೇಮ ನಿವೇದನೆ ಮಾಡಲು ಬಯಸಿದ್ದರೆ ಇಂದು ಇದಕ್ಕೆ ಬೆಸ್ಟ್ ದಿನ. ಮನ ಗೆದ್ದ ಹುಡುಗ ಅಥವಾ ಹುಡುಗಿಯನ್ನು ಭೇಟಿಯಾಗಿ ಪ್ರೇಮ ನಿವೇದನೆ ಮಾಡಿ. ಭೇಟಿಯಾಗಿ ಪ್ರೇಮ ನಿವೇದನೆ ಮಾಡಿದ್ರೆ ಅವ್ರ ಪ್ರತಿಕ್ರಿಯೆಯನ್ನು ನೀವು ನೋಡಬಹುದು. ಅವ್ರು ಒಪ್ಪಿಕೊಂಡರೆ ಖುಷಿಯನ್ನು ಹಂಚಿಕೊಳ್ಳಬಹುದು.
ಈಗ್ಲೂ ಹುಡುಗ/ಹುಡುಗಿ ಮುಂದೆ ನಿಲ್ಲಲು ಭಯವಾಗ್ತಿದ್ದರೆ ಪ್ರೇಮ ಪತ್ರದ ಸಹಾಯ ಪಡೆಯಿರಿ. ನಿಮ್ಮ ಮನಸ್ಸಿನ ಮಾತನ್ನು ಪತ್ರದಲ್ಲಿ ಬರೆದು ಮೆಚ್ಚಿದವರಿಗೆ ನೀಡಿ. ಡಿಜಿಟಲ್ ಯುಗದಲ್ಲಿ ಲವ್ ಲೆಟರ್ ಬರೆಯುವುದು ರೋಮ್ಯಾಂಟಿಕ್ ಅನುಭವ ನೀಡುತ್ತದೆ.
ಕಣ್ಣಲ್ಲಿ ಕಣ್ಣಿಟ್ಟು ಪ್ರೇಮ ನಿವೇದನೆ ಮಾಡಲು ಭಯವಾದ್ರೆ ವಿಡಿಯೋ ಕಾಲ್ ಸಹಾಯ ಪಡೆಯಿರಿ. ಈಗ ಎಲ್ಲರ ಬಳಿಯೂ ಸ್ಮಾರ್ಟ್ಫೋನ್ ಇದ್ದೇ ಇದೆ. ಪ್ರೇಮಿಯನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದಾದ್ರೆ ವಿಡಿಯೋ ಕಾಲ್ ಮಾಡಿ ಪ್ರೇಮ ನಿವೇದನೆ ಮಾಡಿ, ವಿಡಿಯೋ ಮೆಸ್ಸೇಜ್ ಕಳುಹಿಸಿ ಕೂಡ ನೀವು ಪ್ರೇಮ ನಿವೇದನೆ ಮಾಡಬಹುದು.
ರೋಮ್ಯಾಂಟಿಕ್ ಸಾಂಗ್ ಜೊತೆ ಒಂದು ಉಡುಗೊರೆ ನೀಡಿ. ನೀವು ಪ್ರೀತಿಸಿದವರಿಗೆ ಸಂಗೀತ ಇಷ್ಟವಾಗಿದ್ದರೆ ಸುಮಧುರ ಸಂಗೀತದ ಜೊತೆ ಒಳ್ಳೆ ಉಡುಗೊರೆ ನೀಡಿ ಪ್ರೇಮ ನಿವೇದನೆ ಮಾಡಬಹುದು.