ಪ್ರತಿಯೊಬ್ಬ ಪ್ರೇಮಿಗೂ ಹುಟ್ಟುಹಬ್ಬಕ್ಕಿಂತ ಪ್ರೇಮಿಗಳ ದಿನ ವಿಶೇಷವಾದದ್ದು. ವ್ಯಾಲಂಟೈನ್ಸ್ ಡೇ ಹತ್ತಿರ ಬರ್ತಿದ್ದಂತೆ ಪ್ರೇಮಿಗಳ ತಯಾರಿ ಜೋರಾಗಿ ನಡೆಯುತ್ತದೆ. ಉಡುಗೊರೆ ಆಯ್ಕೆ, ಪ್ರೇಮಿಗಳ ದಿನವನ್ನು ಆಚರಿಸುವ ಸ್ಥಳದ ಆಯ್ಕೆ ಹೀಗೆ ಅನೇಕ ತಯಾರಿ ನಡೆಯುತ್ತದೆ. ಇವೆಲ್ಲದರ ಜೊತೆ ನಿಮ್ಮ ಬಗ್ಗೆಯೂ ಸ್ವಲ್ಪ ಗಮನ ನೀಡಿ.
ಪ್ರೇಮಿಗಳ ದಿನದಂದು ಪ್ರೇಮಿ ಕಣ್ಣಿಗೆ ಮತ್ತಷ್ಟು ಆಕರ್ಷಕವಾಗಿ ಕಾಣಬೇಕೆಂದುಕೊಂಡಿದ್ರೆ ಈಗಿನಿಂದಲೇ ಈ ಕೆಲಸ ಶುರು ಮಾಡಿ. ನೀರು ಕುಡಿಯುವುದು ಯಾವಾಗ್ಲೂ ಒಳ್ಳೆಯದು. ಪ್ರೇಮಿಗಳ ಈ ವಾರದಲ್ಲಿ ನಿತ್ಯಕ್ಕಿಂತ ಹೆಚ್ಚು ನೀರು ಹಾಗೂ ಜ್ಯೂಸ್ ಕುಡಿಯಿರಿ. ಇದು ಚರ್ಮಕ್ಕೆ ವಿಶೇಷ ಕಾಂತಿ ನೀಡುತ್ತದೆ. ಎಳನೀರು ಮತ್ತು ತರಕಾರಿ ಜ್ಯೂಸ್ ಕೂಡ ಸೇವನೆ ಮಾಡಬಹುದು.
ಚರ್ಮದ ಕಾಂತಿಗಾಗಿ ಕೆಲವೊಂದು ಫೇಸ್ ಪ್ಯಾಕ್ ಹಚ್ಚಿಕೊಳ್ಳಿ. ಸೈಂದವ ಲವಣವನ್ನು ಆಲಿವ್ ಆಯಿಲ್ ನಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಶುಷ್ಕ ಚರ್ಮದವರಿಗೆ ಇದು ಬೆಸ್ಟ್. ಇದನ್ನು ಹಚ್ಚುವುದ್ರಿಂದ ಚರ್ಮಕ್ಕೆ ತೇವಾಂಶ ವಾಪಸ್ ಬರುತ್ತದೆ.
ಸೈಂದವ ಲವಣದ ಜೊತೆ ಮೊಸರನ್ನು ಸೇರಿಸಿ ಹಚ್ಚಿಕೊಳ್ಳಬಹುದು. ಇದು ಚರ್ಮಕ್ಕೆ ಹೊಳಪು ನೀಡುವ ಜೊತೆಗೆ ತೇವಾಂಶವನ್ನು ಕಾಪಾಡುತ್ತದೆ. ಎರಡು ದೊಡ್ಡ ಚಮಚ ಮೊಸರು, ಒಂದು ಚಮಚ ಸೈಂದವ ಲವಣ ಹಾಗೂ ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ತೊಳೆಯಿರಿ.
ವಾರದ ಮೊದಲೇ ಆಹಾರದಲ್ಲಿ ಬದಲಾವಣೆ ಮಾಡಿ. ಹೆಚ್ಚು ಹಣ್ಣು ಸೇವನೆ ಮಾಡುವ ಜೊತೆಗೆ ರಾತ್ರಿ ಕಡಿಮೆ ಆಹಾರ ಸೇವನೆ ಮಾಡಿ. ಪ್ರೇಮಿಗಳ ದಿನದಂದು ಸಂಗಾತಿಯನ್ನು ಮೆಚ್ಚಿಸಿ.