ಡಾ. ರಾಘವೇಂದ್ರ ನಿರ್ದೇಶನದ ನೆನಪಿರಲಿ ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಚಿತ್ರದ ‘ಓ ಬಾನ ಮೋಡಗಳೇ’ ಎಂಬ ಲಿರಿಕಲ್ ಸಾಂಗ್ ವೊಂದನ್ನು ನಿನ್ನೆ ಕೆದಂಬಡಿ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸೋನು ನಿಗಮ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ.
ವೀಲಿಂಗ್ ಮಾಡಿದ್ರೆ ಬೈಕ್ ಮಾಲೀಕರ ವಿರುದ್ಧ ಕ್ರಮ, ಅಪ್ರಾಪ್ತರ ಪೋಷಕರ ವಿರುದ್ಧವೂ ಕೇಸ್
ಈಗಾಗಲೇ ‘ಪ್ರೇಮಂ ಪೂಜ್ಯಂ’, ಸಿನಿಮಾ ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25ನೇ ಚಿತ್ರ ಇದಾಗಿದ್ದು, ಐಂದ್ರಿತಾ ರೇ ಹಾಗೂ ಬೃಂದಾ ಆಚಾರ್ಯ ನಾಯಕಿಯರಾಗಿ ನಟಿಸಿದ್ದಾರೆ. ಅಕ್ಟೋಬರ್ 29ರಂದು ಈ ಸಿನಿಮಾ ತೆರೆಮೇಲೆ ಬರಲಿದೆ.