ಸಾಮಾನ್ಯವಾಗಿ ನೀವೆಲ್ಲರೂ ಕಾಫಿ ಹೇಗೆ ಮಾಡುತ್ತೀರಾ..? ದಕ್ಷಿಣ ಭಾರತ ಶೈಲಿಯ ಫಿಲ್ಟರ್ ಕಾಫಿ ಆಗಿದ್ದರೆ, ಡಿಕಾಕ್ಷನ್ ತಯಾರಿಸಿ ನಂತರ ಹಾಲು ಬೆರೆಸುತ್ತೀರಾ ಅಲ್ವಾ..? ಆದರೆ, ಇಲ್ಲೊಬ್ಬ ವ್ಯಕ್ತಿ ವಿಭಿನ್ನ ಶೈಲಿಯಲ್ಲಿ ಕಾಫಿ ಮಾರಾಟ ಮಾಡೋದನ್ನು ನೋಡಿದ್ರೆ ಅಚ್ಚರಿ ಪಡ್ತೀರಾ..!
ಗ್ವಾಲಿಯರ್ ಮೂಲದ ಈ ವ್ಯಕ್ತಿಯು ಕಾಫಿ ಮಾಡಲು ಪ್ರೆಶರ್ ಕುಕ್ಕರ್ ಅನ್ನು ಬಳಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ನಂತರ ನೀವು ಖಂಡಿತಾ ಆಶ್ಚರ್ಯ ಪಡೋದ್ರಲ್ಲಿ ಸಂಶಯವೇ ಇಲ್ಲ. ಯಾಕಂದ್ರೆ ನೀವು ಕುಕ್ಕರ್ ಅನ್ನು ಅನ್ನ ಬೇಯಿಸಲು ಅಥವಾ ಸಾಂಬಾರು ಮಾಡಲು ಉಪಯೋಗಿಸಿರುತ್ತೀರಾ….. ಆದ್ರೆ ಇಲ್ಲೊಬ್ಬರು ಕಾಫಿ ತಯಾರಿಸಲು ಬಳಸಿದ್ದಾರೆ.
ಯೂಟ್ಯೂಬ್‌ನಲ್ಲಿ ಫುಡ್ ಬ್ಲಾಗರ್ ವಿಶಾಲ್ ಹಂಚಿಕೊಂಡ ವಿಡಿಯೋದಲ್ಲಿ, ಗ್ವಾಲಿಯರ್‌ನಲ್ಲಿ ಕಾಫಿ ಮಾರುತ್ತಿರುವ ವ್ಯಕ್ತಿಯನ್ನು ತೋರಿಸಲಾಗಿದೆ. ಸೈಕಲ್ ನಲ್ಲಿ ಇವರು ಕಾಫಿ ಮಾರಾಟ ಮಾಡುತ್ತಾರೆ. ಕಾಫಿ ತಯಾರಿಸಲು ಒಂದು ಕಪ್‌ಗೆ ಹಾಲು, ಕಾಫಿ ಮತ್ತು ಸಕ್ಕರೆಯನ್ನು ಸುರಿದಿದ್ದಾನೆ. ನಂತರ ಅದನ್ನು ಸ್ಟೀಲ್ ಜಾರ್‌ಗೆ ವರ್ಗಾಯಿಸಲಾಗುತ್ತದೆ. ನಂತರ ಕುಕ್ಕರ್‌ನ ನಳಿಕೆಯ ಸಹಾಯದಿಂದ ಕಾಫಿಗೆ ಪ್ರೆಶರ್ ಹಾಕಿದಾಗ ನೊರೆಯುಂಟಾಗಿ, ರುಚಿಯಾದ ಕಾಫಿ ಹೀರಲು ಸಿದ್ಧವಾಗಿದೆ.
ಈ ವಿಡಿಯೋವನ್ನು 48,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಕೆಲವರು ಈ ವಿಧಾನವನ್ನು ನೋಡಿ ವಿಚಲಿತರಾಗಿದ್ದರೆ, ಇತರರು ಕಾಫಿ ಮಾಡುವ ವ್ಯಕ್ತಿಯ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.