ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ನಿಂದ ಬಾಧೆ ಪಡುತ್ತಿರುವವರಿಗೆ ಬಾಳೆಹಣ್ಣು ಒಂದು ದಿವ್ಯ ಔಷಧ. ಮುಟ್ಟು ಶುರುವಾಗೋ ವಾರದ ಮುಂಚೆ ನಿತ್ಯವೂ ಒಂದು ಬಾಳೆಹಣ್ಣು ತಿನ್ನುವುದು ಒಳ್ಳೆಯದು.
ಆ ಸಮಯದಲ್ಲಿ ಬಾಧಿಸುವ ಆತಂಕ, ಉದ್ವೇಗದಂತ ಲಕ್ಷಣಗಳು ನಿಯಂತ್ರಣದಲ್ಲಿರುತ್ತದೆ. ಇದರಲ್ಲಿ ಕಬ್ಬಿನಾಂಶ ಅಧಿಕವಾಗಿರುತ್ತದೆ. ಆದ್ದರಿಂದ ವಿಪರೀತ ರಕ್ತ ಸ್ರಾವವಾಗುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತದೆ.
ಮಾನಸಿಕ ಒತ್ತಡ, ಅಶಾಂತಿಯಿಂದ ನಿರುತ್ಸಾಹವಿದ್ದಾಗ ಬಾಳೆಹಣ್ಣು ತಿಂದರೆ ಉತ್ಸಾಹ ಮೂಡುತ್ತದೆ. ಡಿಪ್ರೆಷನ್ ನಿಂದ ಬಾಧೆ ಪಡುವವರು ಬಾಳೆಹಣ್ಣು ತಿಂದ ನಂತರ ಒಳ್ಳೆಯ ಫಲಿತಾಂಶ ದೊರೆಯುತ್ತದೆ.
ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮೆದುಳನ್ನು ಚುರುಕಾಗಿಸುತ್ತದೆ. ಕ್ರಮ ತಪ್ಪಿಸದೆ ಬೆಳಿಗ್ಗೆ, ಮಧ್ಯಾಹ್ನ ಊಟದ ನಂತರ ಬಾಳೆಹಣ್ಣು ತಿನ್ನುವವರಿಗೆ ಮೆದುಳು ಮೊದಲಿಗಿಂತ ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ.