ಬೆಂಗಳೂರು: ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಉಸಿರುಗಟ್ಟಿಸಿ ಕೊಂದ ಯುವಕನೊಬ್ಬ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಲಿಂಗಧೀರ ಮಲ್ಲಸಂದ್ರದಲ್ಲಿ ನಡೆದಿದೆ.
ಅಂಕೋಲಾ ಮೂಲದ ಉಷಾ (25) ಕೊಲೆಯಾದ ಯುವತಿ. ತಮಿಳುನಾಡು ಮೂಲದ ಗೋಪಾಲಕೃಷ್ಣ (30) ಯುವತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ.
2013 ರ ಪಾಟ್ನಾ ಸರಣಿ ಸ್ಫೋಟ ಪ್ರಕರಣದ ತೀರ್ಪು ಪ್ರಕಟ; 9 ಮಂದಿ ಅಪರಾಧಿಗಳಿಗೆ ಶಿಕ್ಷೆ
ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಉಷಾಳನ್ನು ಗೋಪಾಲಕೃಷ್ಣ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಉಷಾ, ಗೋಪಾಲಕೃಷ್ಣನ ಪ್ರೀತಿ ನಿರಾಕರಿಸಿದ್ದಳು. ಇದೇ ಕಾರಣದಿಂದ ಕೋಪಗೊಂಡ ಯುವಕ, ಉಷಾಳ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ಗೆದ್ದಲಾಪುರದ ಬಳಿ ಬಂದು ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.