ಫಸ್ಟ್ ಕ್ರಶ್, ಫಸ್ಟ್ ಲವ್, ಫಸ್ಟ್ ಬ್ರೇಕ್ ಅಪ್.. ಜೀವನದಲ್ಲಿ ತುಂಬಾ ಕಾಡುವಂತಹ ನೆನಪುಗಳು. ಮೊದಲ ಪ್ರೀತಿಯು ಫಲಿಸಿದರೆ ಅದು ಅದ್ಭುತವಾದ ಅನುಭವ. ಅದೇ ಮೊದಲ ಪ್ರೀತಿ ಸೋತರೆ ಅದು ಜೀವನದಲ್ಲಿ ಹೃದಯವಿದ್ರಾವಕ ಅನುಭವ. ಆ ಅನುಭವ ಬಹಳಷ್ಟು ಪಾಠಗಳನ್ನು ಕಲಿಸುತ್ತದೆ.
ಮೊದಲ ಪ್ರೀತಿ ಮತ್ತು ಮೊದಲ ಬ್ರೇಕ್ ಅಪ್ ಯಾವಾಗಲೂ ತೀವ್ರವಾದ ಭಾವನೆಗಳನ್ನು ಒಳಗೊಂಡಿರುತ್ತದೆ. ಅನೇಕ ಬಾರಿ ಜನರು ತಮ್ಮ ಶಾಲಾ ಜೀವನದಲ್ಲಿ ಈ ಅನುಭವವನ್ನು ಹೊಂದಿರುತ್ತಾರೆ. ಅಂತಹ ನೋವಿಗೆ ಬಿದ್ದ ಪ್ರೇಮಿ ತನ್ನನ್ನು ಮರಳಿ ಪಡೆಯಲು ತನ್ನ ಜೀವನದ ಪ್ರೀತಿಯನ್ನು ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
“ಬೇಬಿ ಮಾನ್ ಜಾವೋ ನಾ” ಎಂಬ ಶೀರ್ಷಿಕೆಯೊಂದಿಗೆ ‘ಫಂಟಾಪ್’ ಎಂಬ ಇನ್ ಸ್ಟಾಗ್ರಾಂ ಪುಟದಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ ಶಾಲಾ ಬಾಲಕಿ ಫುಟ್‌ಪಾತ್‌ನಲ್ಲಿ ನಿಂತಿರುವುದನ್ನು ಕಾಣಬಹುದು. ಶಾಲಾ ಬಾಲಕ ನೆಲದ ಮೇಲೆ ಕೂತು ಬಾಲಕಿಯ ಕಾಲು ಹಿಡಿದು ಕೈಮುಗಿದು ತನ್ನ ಜೀವನಕ್ಕೆ ಆತನನ್ನು ಮತ್ತೆ ಕರೆದುಕೊಳ್ಳುವಂತೆ ಬೇಡಿಕೊಳ್ಳುತ್ತಿದ್ದಾನೆ.
ಹುಡುಗನು ಹುಡುಗಿಯ ಪಾದಗಳನ್ನು ಸ್ಪರ್ಶಿಸುವುದನ್ನು ಮತ್ತು ಅವಳು ದೂರ ಹೋಗದಂತೆ ಆಕೆಯ ಮನವೊಲಿಸಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಆದರೆ ಹುಡುಗನ ಮನವಿಗೆ ಆಕೆ ಇಲ್ಲ ಎಂದು ತಲೆಯಾಡಿಸುತ್ತಾಳೆ. ಸಾವಿರಾರು ನೆಟ್ಟಿಗರು ಈ ವಿಡಿಯೋ ಲೈಕ್ ಮಾಡಿದ್ದು ತಮ್ಮದೇ ದೃಷ್ಟಿಯಲ್ಲಿ ಕಮೆಂಟ್ ಮಾಡಿದ್ದಾರೆ.