ಶುಕ್ರಗ್ರಹ ಪ್ರಕಾಶಮಾನವಾದ ಗ್ರಹ. ಹಾಗೆ ಪ್ರೀತಿಯ ಸಂಕೇತ. ಶುಕ್ರಗ್ರಹ ದೋಷಕ್ಕೊಳಗಾದವರು ಬಿಳಿ ಬಣ್ಣದ ಕುದುರೆಯನ್ನು ದಾನ ಮಾಡಬೇಕು. ವರ್ಣರಂಜಿತ ಬಟ್ಟೆ, ರೇಷ್ಮೆ ಬಟ್ಟೆ, ತುಪ್ಪ, ಸುಗಂಧ, ಸಕ್ಕರೆ, ಖಾದ್ಯ ತೈಲ, ಶ್ರೀಗಂಧ, ಕರ್ಪೂರದ ದಾನ ಮಾಡಬೇಕು. ಶುಕ್ರನಿಗೆ ಸಂಬಂಧಿಸಿದ ರತ್ನವನ್ನು ದಾನ ಮಾಡುವುದ್ರಿಂದಲೂ ದೋಷ ನಿವಾರಣೆಯಾಗುತ್ತದೆ.
ಶುಕ್ರವಾರ ಸಂಜೆ ಈ ವಸ್ತುಗಳ ದಾನ ಮಾಡಬೇಕು. ಶುಕ್ರವಾರ ವೃತ ಮಾಡುವುದ್ರಿಂದಲೂ ದೋಷ ನಿವಾರಣೆಯಾಗುತ್ತದೆ. ಈ ದಿನ ಮಿಠಾಯಿ, ಖೀರ್ ಅಥವಾ ಸಿಹಿ ತಿಂಡಿಯನ್ನು ಬಡವರಿಗೆ ದಾನ ಮಾಡಬೇಕು. ಊಟದಲ್ಲಿ ಒಂದು ಭಾಗವನ್ನು ಆಕಳಿಗೆ ನೀಡಬೇಕು.
ಶುಕ್ರನಿಗೆ ಸಂಬಂಧಿಸಿದ ವಸ್ತುಗಳಾದ ಸುಗಂಧ, ತುಪ್ಪ, ಖಾದ್ಯ ತೈಲವನ್ನು ಶುಕ್ರವಾರ ಬಳಕೆ ಮಾಡಬಾರದು. ಶುಕ್ರವಾರ ಬಿಳಿ ಆಕಳಿಗೆ ಆಹಾರ ನೀಡಿ. ಕಪ್ಪು ಇರುವೆಗಳಿಗೆ ಸಕ್ಕರೆಯನ್ನು ನೀಡಿ. ಅವಶ್ಯವಿರುವ ವ್ಯಕ್ತಿಗೆ ಬಿಳಿ ಬಟ್ಟೆ, ಬಿಳಿ ಬಣ್ಣದ ಸಿಹಿಯನ್ನು ದಾನ ಮಾಡಿ.
ಶುಕ್ರವಾರ ಯಾವುದೇ ಮಹತ್ವದ ಕೆಲಸಕ್ಕೆಂದು ಮನೆ ಬಿಡುವ ಮೊದಲು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕನ್ಯೆ ಪಾದ ಮುಟ್ಟಿ ನಮಸ್ಕರಿಸಿ.
ಮನೆಯಲ್ಲಿ ಬಿಳಿ ಕಲ್ಲನ್ನು ಅವಶ್ಯವಾಗಿ ಇಡಿ. ಶುಕ್ರವಾರ ಹಸುವಿನ ಹಾಲಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಅವಕಾಶ ಸಿಕ್ಕರೆ ಕನ್ಯಾದಾನ ಮಾಡಿ.
ಶುಕ್ರವಾರ ದಕ್ಷಿಣ ಮುಖವಿರುವ ಶಂಖದಿಂದ ಭಗವಂತ ವಿಷ್ಣುವಿಗೆ ಜಲವನ್ನು ಅರ್ಪಿಸಿ. ಈ ಉಪಾಯದಿಂದ ತಾಯಿ ಲಕ್ಷ್ಮಿ ಬೇಗ ಪ್ರಸನ್ನಳಾಗ್ತಾಳೆ.