
ಗ್ಲಾಮರಸ್ ಸಿನಿ ಇಂಡಸ್ಟ್ರಿಯಲ್ಲಿ ಪ್ರೀತಿಯನ್ನು ಹುಡುಕುವುದು ಕಷ್ಟಕರ. ಆ ಪ್ರೀತಿಯನ್ನು ಜೀವಂತವಾಗಿರಿಸಿಕೊಳ್ಳುವುದು ಇನ್ನೂ ಕಷ್ಟಕರವಾಗಿರುತ್ತದೆ. ನಟ, ನಟಿಯರಿಂದ ಹಿಡಿದು ಸಂಗೀತಗಾರರವರೆಗೆ ಈ ಜಗಮಗಿಸುವ ಇಂಡಸ್ಟ್ರಿಯಲ್ಲಿ ಪ್ರೀತಿಯನ್ನ ಕಂಡುಕೊಂಡರು ಅದನ್ನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅಮೀರ್ ಖಾನ್, ಸುಶ್ಮಿತಾ ಸೇನ್, ಜೊತೆಗೆ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ಅವರಂತಹ ಹಲವಾರು ಪ್ರಸಿದ್ಧ ವ್ಯಕ್ತಿಗಳು ಈ ವರ್ಷ ಒಡಕು ಮತ್ತು ದುಃಖವನ್ನು ಅನುಭವಿಸಿದ್ದಾರೆ. 2021 ರ ಐದು ದೊಡ್ಡ ಸೆಲೆಬ್ರಿಟಿಗಳ ಬ್ರೇಕಪ್, ಡೈವೋರ್ಸ್ ಗಳ ಕಥೆ ಇಲ್ಲಿದೆ
1. ಅಮೀರ್ ಖಾನ್ ಮತ್ತು ಕಿರಣ್ ರಾವ್
ಈ ವರ್ಷದ ಜುಲೈ ತಿಂಗಳಿನಲ್ಲಿ ಅಮೀರ್ ಖಾನ್ ಹಾಗೂ ಕಿರಣ್ ರಾವ್ ತಮ್ಮ ಹದಿನೈದು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು. ಈ ಬಗ್ಗೆ ಇಬ್ಬರು ಕುಳಿತು ಈ ವಿಚ್ಛೇದನ ನಮ್ಮ ನಮ್ಮ ಹೊಸ ಜೀವನಕ್ಕೆ ನಾಂದಿ ಎಂದು ಹೇಳಿಕೆ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಟ್ರೋಲ್ಸ್ ಮತ್ತು ಮೀಮ್ ಗಳಿಗೆ ವಸ್ತು ವಿಷಯವಾಗಿತ್ತು.
2. ಸಮಂತಾ ಮತ್ತು ನಾಗಚೈತನ್ಯ
ಜೀವನಪೂರ್ತಿ ಜೊತೆಯಾಗಿರುವ ಆಸೆಯಲ್ಲಿ 2017ರಲ್ಲಿ ಮದುವೆಯಾದ ಜೋಡಿ 2021ರಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿತು.
ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಸಮಂತಾ ಹೆಸರು ಬದಲಾಯಿಸಿಕೊಂಡ ಮೇಲೆ ಶುರುವಾದ ಅಂತೆ ಕಂತೆಗಳಿಗೆ, ಅಕ್ಟೋಬರ್ ನಲ್ಲಿ ಸಾಮಾಜಿಕ ಜಾಲತಾಣದಲ್ಲೆ ನಾಗಚೈತನ್ಯ ಹಾಗೂ ಸಮಂತಾ ಜೋಡಿ ವಿಭಜನೆಯ ಮಾಹಿತಿ ನೀಡಿದ್ದರು.

BIG NEWS: ಭರ್ಜರಿ ಏರಿಕೆ ಕಂಡ ಸುಪ್ರಿಯಾ ಲೈಫ್ ಸೈನ್ಸ್ ಷೇರುಗಳು
3. ಕ್ಯಾಮಿಲ್ಲಾ ಮತ್ತು ಶಾನ್ ಮ್ಯಾಂಡಿಸ್
ಇಬ್ಬರು ಪಾಪ್ ಮ್ಯೂಸಿಕ್ ದುನಿಯಾದ ಟಾಪ್ ಗಾಯಕರು. ಸೆನೋರಿಟಾ ಸೆಟ್ ನಲ್ಲಿ ಭೇಟಿಯಾದ ಶಾನ್ ಹಾಗೂ ಕ್ಯಾಮಿಲ್ಲಾ 2019ರಿಂದ ಪ್ರೀತಿಯಲ್ಲಿದ್ದರು. ಆದರೆ ನಾನಾ ಕಾರಣಗಳಿಂದ ಇವರಿಬ್ಬರ ಎರಡು ವರ್ಷದ ಸಂಬಂಧ ಮುರಿದುಬಿದ್ದಿದೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡು, ನಮ್ಮ ಪ್ರೀತಿ ಮುಗಿದಿರಬಹುದು ಆದರೆ ಸ್ನೇಹ ಮುಂದುವರೆಯುತ್ತದೆ ಎಂದರು. ಆದರೆ ಇವರಿಬ್ಬರ ಬ್ರೇಕಪ್ ಅಭಿಮಾನಿಗಳ ದುಃಖಕ್ಕೆ ಕಾರಣವಾಗಿದ್ದಂತು ನಿಜ.
4. ಜೀಜೀ ಹಡೀಡ್ ಮತ್ತು ಜ಼್ಯನ್ ಮಲಿಕ್
ಜೀಜೀ ವಿಶ್ವದ ಟಾಪ್ ಮಾಡೆಲ್, ಮಲಿಕ್ ಅಮೇರಿಕಾದ ಟಾಪ್ ಮ್ಯೂಸಿಷಿಯನ್. 2015 ರಲ್ಲಿ ಶುರುವಾದ ಇವರಿಬ್ಬರ ಪ್ರೀತಿ 2021ರಲ್ಲಿ ಮುಗಿದಿದೆ. ಜೀಜೀ ತಾಯಿ ಜ಼್ಯನ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪ ಹೊರಿಸಿದ ಮೇಲೆ ಈ ಸಂಬಂಧ ಮುರಿದಿದೆ. ಇತ್ತ ಜ಼್ಯನ್ ಎಲ್ಲಾ ಆರೋಪಗಳನ್ನ ಸುಳ್ಳು ಎಂದು ತಳ್ಳಿಹಾಕಿದ್ದಾರೆ. ಇವರಿಬ್ಬರಿಗು ಒಂದೂವರೆ ವರ್ಷದ ಮಗಳಿದ್ದಾಳೆ.
5. ಸುಷ್ಮಿತಾ ಸೇನ್ ಮತ್ತು ರೊಹ್ಮಾನ್ ಶಾಲ್
ಹಲವು ದಿನಗಳಿಂದ ಚರ್ಚೆಯಲ್ಲಿದ್ದ ಇವರಿಬ್ಬರ ಬ್ರೇಕಪ್ ವಿಚಾರಕ್ಕೆ ಸ್ವತಃ ಸುಷ್ಮಿತಾ ಅಂತ್ಯ ಹಾಡಿದ್ದಾರೆ. ಇಬ್ಬರು ಒಟ್ಟಿಗಿರುವ ಚಿತ್ರ ಹಂಚಿಕೊಂಡು, ಸ್ನೇಹಿತರಾಗಿ ನಮ್ಮ ಸಂಬಂಧ ಶುರುವಾಯ್ತು ಇನ್ನು ಮುಂದೆಯು ಸ್ನೇಹಿತರಾಗಿ ಇರುತ್ತೇವೆ ಎಂದು ಬ್ರೇಕ್ ಅಪ್ ಸುದ್ದಿಯನ್ನ ಕೆಲ ದಿನಗಳ ಹಿಂದೆ ಕನ್ಫರ್ಮ್ ಮಾಡಿದ್ದರು.
