alex Certify ಪ್ರೀತಿಸಿ ಮದುವೆಯಾಗಿ 6 ತಿಂಗಳಲ್ಲೇ ಕೈಕೊಟ್ಟ ಯುವಕ; ಪತ್ನಿಯ ಸೋದರಿಯ ಜೊತೆಗೆ ಪರಾರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾಗಿ 6 ತಿಂಗಳಲ್ಲೇ ಕೈಕೊಟ್ಟ ಯುವಕ; ಪತ್ನಿಯ ಸೋದರಿಯ ಜೊತೆಗೆ ಪರಾರಿ….!

 

ಪ್ರೀತಿಸಿ ಮದುವೆಯಾದ ಯುವಕನೊಬ್ಬ ವಧುವಿನ ಸೋದರಿಯೊಂದಿಗೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಕೊತ್ವಾಲಿ ಎಂಬಲ್ಲಿ 6 ತಿಂಗಳ ಹಿಂದೆ ಯುವಕನೊಬ್ಬ ತನ್ನ ಪ್ರಿಯತಮೆ ಜೊತೆ ವಿವಾಹವಾಗಿದ್ದ. ಆದರೆ ಮದುವೆ ನಂತರ ಆತನಿಗೆ ತನ್ನ ಪತ್ನಿಯ ಕಿರಿಯ ಸಹೋದರಿ ಮೇಲೆ ಪ್ರೇಮಾಂಕುರವಾಗಿದೆ.

ಆಕೆ ಆಗಾಗ ಮನೆಗೆ ಬರ್ತಾ ಇದ್ದಿದ್ರಿಂದ ಅವಳ ಜೊತೆ ಯುವಕ ಸಲುಗೆ ಬೆಳೆಸಿದ್ದಾನೆ. ಎರಡು ದಿನಗಳ ಹಿಂದೆ ಕಿರಿಯ ನಾದಿನಿಯ ಜೊತೆಗೆ ಯುವಕ ಊರು ಬಿಟ್ಟು ಓಡಿ ಹೋಗಿದ್ದ. ಈ ವಿಷಯ ತಿಳಿದಾಗ ಗ್ರಾಮದಲ್ಲಿ ಕೋಲಾಹಲವೇ ಉಂಟಾಯಿತು. ಪತಿಯೊಂದಿಗೆ ತನ್ನ ಸಹೋದರಿ ತಲೆಮರೆಸಿಕೊಂಡಿರುವುದನ್ನು ತಿಳಿದ ಪತ್ನಿ ತನ್ನ ಗಂಡನ ಮನೆ ತೊರೆದಿದ್ದಾಳೆ.

ಈ ವಿಚಾರಕ್ಕೆ ಎರಡೂ ಕುಟುಂಬಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೂ ಪಂಚಾಯ್ತಿ ಮುಂದೆ ಹಾಜರಾದ ಯುವಕ, ತನ್ನ ಪತ್ನಿಗೆ ವಿಚ್ಛೇದನ ನೀಡಿ ನಾದಿನಿಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ. ಆದರೆ ಪಂಚಾಯ್ತಿ ತೀರ್ಮಾನಕ್ಕೆ ಪತ್ನಿ ಸಮ್ಮತಿಸಿಲ್ಲ. ಎರಡೂ ಕುಟುಂಬಗಳು ಪೊಲೀಸ್‌ ಠಾಣೆ ಮೆಟ್ಟಿಲೇರಿವೆ. ವಿವಾಹಿತ ಮಹಿಳೆಯ ಮನವೊಲಿಸಲು ಮನೆಯವರು ಪ್ರಯತ್ನಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...