ಪ್ರೀತಿ ಒಂದು ಸುಂದರ ಅನುಭವ. ಅದನ್ನು ಅನುಭವಿಸಬಹುದು. ವರ್ಣಿಸಲು ಸಾಧ್ಯವಿಲ್ಲ. ಈ ಪ್ರೀತಿ ನಿಮ್ಮ ಸಂತೋಷದ ಜೊತೆ ತೂಕವನ್ನು ಹೆಚ್ಚಿಸುತ್ತೆ ಎಂಬ ಸಂಗತಿ ನಿಮಗೆ ಗೊತ್ತಾ? ಯಸ್, ಪ್ರೀತಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಂತ ನಾವು ಹೇಳಿಲ್ಲ ಸ್ವಾಮಿ, ಸಂಶೋಧನೆಯೊಂದು ಹೇಳ್ತಿದೆ.
ವ್ಯಕ್ತಿ ಪ್ರೀತಿಗೆ ಬಿದ್ದರೆ ಆತನ ತೂಕ ಹೆಚ್ಚಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಸಂಶೋಧಕರು 15,000 ಜನರ ಅಧ್ಯಯನ ನಡೆಸಿದ್ದಾರೆ. ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆ ಹಾಗೂ ಪುರುಷರ ಬಿಎಂಐ ಹೋಲಿಕೆ ಮಾಡಿದ ನಂತ್ರ ಈ ಘೋಷಣೆ ಮಾಡಿದ್ದಾರೆ.
ಸಂಶೋಧಕರ ಪ್ರಕಾರ ಪ್ರೀತಿ ಹಾಗೂ ತೂಕಕ್ಕೆ ಪರಸ್ಪರ ಸಂಬಂಧವಿದೆ. ಪ್ರೀತಿಯಲ್ಲಿ ಬಿದ್ದವರು ಕೆಲ ದಿನಗಳ ನಂತ್ರ ಸಂಗಾತಿಯನ್ನು ಸೆಳೆಯುವ ಯತ್ನ ಕೈಬಿಡುತ್ತಾರೆ. ತಮ್ಮ ಬಗ್ಗೆ ಗಮನ ನೀಡುವುದು ಕಡಿಮೆಯಾಗುತ್ತದೆ. ಇದ್ರಿಂದ ತೂಕ ಹೆಚ್ಚಲು ಶುರುವಾಗುತ್ತದೆ.
ಒಂಟಿಯಾಗಿರುವವರು ಸಿಕ್ಕ ಸಮಯದಲ್ಲಿ ಜಿಮ್ ಗೆ ಹೋದ್ರೆ ಸಂಗಾತಿ ಹೊಂದಿರುವವರು ಅಮೂಲ್ಯ ಸಮಯವನ್ನು ಸಂಗಾತಿ ಜೊತೆ ಕಳೆಯಲು ಬಯಸುತ್ತಾರೆ. ಇದು ಅರಿವಿಲ್ಲದೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಪ್ರೀತಿಯ ಆರಂಭದಲ್ಲಿ ಸಂತೋಷ ಹೆಚ್ಚಿರುತ್ತದೆ. ಜನರು ಖುಷಿಯಾಗಿರುವಾಗ ಹ್ಯಾಪಿ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಬಿಡಗಡೆಯಾಗುತ್ತದೆ. ಇದು ಚಾಕೊಲೇಟ್ ಸೇರಿದಂತೆ ಸಿಹಿ ತಿನ್ನುವ ಬಯಕೆಯುಂಟು ಮಾಡುತ್ತದೆ. ಸಿಹಿ ಸೇವನೆ ತೂಕ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ.