alex Certify ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ…!

ಒಬ್ಬ ಸಾಮಾನ್ಯ ಹುಡುಗ ಅಥವಾ ಹುಡುಗಿ ಲವ್ವರ್ ಕೈಕೊಟ್ರೆ, ಅವರವರೇ ಕಿತ್ತಾಡಿಕೊಳ್ತಾರೆ. ಆನಂತರ ಒಂದೆರಡು ದಿನ‌ ದುಃಖದಲ್ಲಿದ್ದು ಜೀವನ ಮುಂದುವರೆಸುತ್ತಾರೆ. ಆದ್ರೆ ಇಲ್ಲೊಬ್ಬ ಪಾಗಲ್ ಪ್ರೇಮಿ, ಪ್ರಿಯತಮೆ ಕೈಕೊಟ್ಟಳು ಅಂತಾ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ್ದಾನೆ.‌

ಕಿಡ್ನಾಪ್ ಪ್ರಕರಣದಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಶ್ರೀನಿವಾಸ, ಕಾವ್ಯಾ ಎನ್ನುವವಳನ್ನ ಎರಡು ತಿಂಗಳಿನಿಂದ ಪ್ರೀತಿಸುತ್ತಿದ್ದ. ಆದರೆ ಆಕೆ ಈತನ ಪ್ರೀತಿಯನ್ನ ಇತ್ತೀಚೆಗೆ ನಿರಾಕರಿಸಿದ್ದಾಳೆ. ಈ ಸಿಟ್ಟಿನಿಂದ ಅವಳ ಸಹೋದರನನ್ನೆ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾನೆ. ಹೌದು ಕಾವ್ಯಾಳ ಪ್ರೀತಿಯಲ್ಲಿ ಹುಚ್ಚನಾಗಿದ್ದ ಈತ, ಆಕೆ ಸಹೋದರ ವೆಂಕಟೇಶ್ ಎನ್ನುವವನನ್ನ ಅಪಹರಿಸಿ, ಹೊಸಕೋಟೆಗೆ ಕರೆದೊಯ್ದು ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ಈ ವಿಷಯ ಕಾವ್ಯಾಳ ಮನೆಯವರಿಗೆ ತಿಳಿದ ನಂತರ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸನ ವಿರುದ್ಧ ಕಿಡ್ನಾಪ್ ಹಾಗೂ ಹಲ್ಲೆ ಮಾಡಿದ್ದಾನೆಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ನಂತರ ಶ್ರೀನಿವಾಸನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...