ಪ್ರೇಮಿಗಳು ಮದುವೆಗೂ ಮೊದಲೇ ಲಿವ್ ಇನ್ ರಿಲೇಶನ್ಷಿಪ್ ನಲ್ಲಿರೋದು ಇತ್ತೀಚೆಗೆ ಕಾಮನ್ ಆಗ್ಬಿಟ್ಟಿದೆ. ಮದುವೆ ಎಂಬ ಬಂಧನವೇ ಬೇಡ ಎಂದುಕೊಳ್ಳೋ ಎಷ್ಟೋ ಜೋಡಿಗಳು ಜೊತೆಯಾಗಿ ಒಂದೇ ಮನೆಯಲ್ಲಿ ಗಂಡ-ಹೆಂಡತಿಯಂತೆ ಇದ್ದುಬಿಡ್ತಾರೆ. ಪೆನ್ಸಿಲ್ವೇನಿಯಾದಲ್ಲಿ ನೆಲೆಸಿರೋ ಟ್ರೇಸಿ ಡೌಡ್ಸ್ ಎಂಬ ಯುವತಿ ಕೂಡ ತನ್ನ ಗೆಳೆಯನೊಂದಿಗೆ ವಾಸಿಸಲು ಉತ್ತಮವಾದ ಮನೆಯನ್ನು ಖರೀದಿಸಿದ್ಲು. ಅವಳು ಮತ್ತು ಅವಳ ಪ್ರೇಮಿ ಆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.
ಆ ಮನೆಯ ಕೆಲಸಗಳೆಲ್ಲವೂ ಗೆಳೆಯನ ಜವಾಬ್ಧಾರಿಯಾಗಿತ್ತು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು, ಆದರೆ ಕೆಲವು ದಿನಗಳ ನಂತರ ಗೆಳೆಯನಿಗೆ ತನ್ನ ಗೆಳತಿಯ ಸ್ನಾನಗೃಹದಿಂದ ಕೆಟ್ಟ ದುರ್ವಾಸನೆ ಬರಲಾರಂಭಿಸಿತು. ರಾತ್ರಿ ವೇಳೆ ಈ ದುರ್ವಾಸನೆ ಹೆಚ್ಚಾಗಿ ಬರುತ್ತಿತ್ತು. ಇದರಿಂದ ಬಾಯ್ ಫ್ರೆಂಡ್ ಗೆ ಆ ಮನೆಯಲ್ಲಿ ಉಳಿಯೋದೇ ಕಷ್ಟವಾಗಿತ್ತು. ರಾತ್ರಿ ಪ್ರಿಯತಮೆ ಅಂಥದ್ದೇನು ಮಾಡ್ತಾಳೆ ಅಂತಾ ಆತ ತಲೆಕೆಡಿಸಿಕೊಂಡಿದ್ದ.
ಬಾತ್ ರೂಮಿನಲ್ಲಿ ಏನಾದ್ರೂ ಇದೆಯಾ? ಬೆಕ್ಕು ಅಥವಾ ಯಾವುದಾದ್ರೂ ಪ್ರಾಣಿ ಸತ್ತು ಬಿದ್ದಿರಬಹುದಾ ಅಂತ ಯುವಕ ಎಲ್ಲಾ ಕಡೆ ಹುಡುಕಾಟ ನಡೆಸಿದ. ಪ್ಲಂಬರ್ ಕೂಡ ಕರೆಸಿದ. ಈ ಸಂದರ್ಭದಲ್ಲಿ ಬಯಲಾದ ವಾಸನೆಯ ರಹಸ್ಯ ಆ ಯುವಕನನ್ನು ಬೆಚ್ಚಿ ಬೀಳಿಸಿತ್ತು. ಅದನ್ನು ನೋಡಿ ಟ್ರೇಸಿ ಎಂಬ ಆ ಯುವತಿ ಕೂಡ ಶಾಕ್ ಆಗಿದ್ದಾಳೆ. ಬಾತ್ ರೂಮನ್ನು ಸ್ವಲ್ಪ ಅಗೆದು ನೋಡಿದಾಗ ಅಲ್ಲಿ ಹೂತಿಟ್ಟಿದ್ದ ಮಾನವನ ಅಸ್ಥಿಪಂಜರ ಅವರ ಕಣ್ಣಿಗೆ ಬಿದ್ದಿದೆ.
ಟ್ರೇಸಿ ಆ ಮನೆಯನ್ನು ಖರೀದಿಸುವ ಮೊದಲೇ ಯಾರೋ ವ್ಯಕ್ತಿಯೊಬ್ಬನನ್ನು ಕೊಂದು ಬಾತ್ ರೂಮಿನಲ್ಲಿ ಹೂತಿಟ್ಟಿದ್ದರು. ಶವ ಅಲ್ಲೇ ಕೊಳೆತು ದುರ್ನಾತ ಬರುತ್ತಿತ್ತು. ಕೂಡಲೇ ಟ್ರೇಸಿ ಮತ್ತವಳ ಗೆಳೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ಮಾಡಿದಾಗ ಶವವನ್ನು ಬಹಳ ಹಿಂದೆಯೇ ಅಲ್ಲಿ ಹೂತು ಹಾಕಿರುವುದು ಬಯಲಾಗಿದೆ.