ಈಗ ಎಲ್ಲರಿಗೂ ಗ್ಯಾಸ್ಟ್ರಿಕ್ ಸಮಸ್ಯೆ ಸರ್ವೇ ಸಾಮಾನ್ಯ. ಕರಿದ ತಿಂಡಿಗಳು, ಆಲೂಗಡ್ಡೆಯಂತಹ ತರಕಾರಿಗಳನ್ನು ತಿಂದಾಗ ಬೇಡವೆಂದರೂ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುತ್ತದೆ. ಆಗಾಗ ಹೂಸು ಬರುವುದು ಮಾಮೂಲು.
ಹೊಟ್ಟೆಯಲ್ಲಿರೋ ಗ್ಯಾಸ್ ಸುಲಭವಾಗಿ ಹೊರಕ್ಕೆ ಹೋದ್ರೆ ಯಾವುದೇ ಸಮಸ್ಯೆಯಿಲ್ಲ. ಎಂಥದ್ದೇ ಸಂದರ್ಭದಲ್ಲೂ ಹೂಸು ಬಿಡದೇ ಕಟ್ಟಿಕೊಳ್ಳುವ ಪ್ರಯತ್ನ ಮಾಡಬಾರದು.
ಯಾಕಂದ್ರೆ ಬ್ರೆಜಿಲ್‌ನ ಯುವತಿಯೊಬ್ಬಳು ಇದೇ ರೀತಿ ಹೂಸು ಕಟ್ಟಿಕೊಂಡು ಈಗ ಆಸ್ಪತ್ರೆ ಸೇರಿದ್ದಾಳೆ. ಈಕೆಯ ಹೆಸರು ವಿಟೋರಿಯಾ ಡಿ ಫೆಲಿಸ್ ಮೊರೇಸ್. Viih Tube ಎಂಬ ಯುಟ್ಯೂಬ್ ಚಾನೆಲ್ ಹೊಂದಿದ್ದಾಳೆ. ಪೋರ್ಚುಗಲ್‌ನಲ್ಲಿ ನಡೆದ ರಾಕ್ ಇನ್ ರಿಯೊ ಲಿಸ್ಬೋವಾ 2022 ಸಂಗೀತ ಉತ್ಸವದಲ್ಲಿ ತನ್ನ ಗೆಳೆಯ ಎಲಿಯೆಜರ್‌ನೊಂದಿಗೆ ಪಾಲ್ಗೊಂಡಿದ್ದಳು.
ಅಲ್ಲಿ ಆಕೆಗೆ ಆಗಾಗ ಹೂಸು ಬರಲಾರಂಭಿಸಿತ್ತು. ಆದ್ರೆ ಪಕ್ಕದಲ್ಲಿ ಬಾಯ್‌ಫ್ರೆಂಡ್ ಇದ್ದಿದ್ರಿಂದ ಅವನ ಎದುರು ಮುಜುಗರವಾಗುತ್ತದೆ ಎಂದುಕೊಂಡು ಆಕೆ ಗ್ಯಾಸ್ ಅನ್ನು ಬಿಡದೇ ಕಟ್ಟಿಕೊಂಡಿದ್ದಾಳೆ. ಪರಿಣಾಮ ಆಕೆಗೆ ತೀವ್ರ ಹೊಟ್ಟೆನೋವು ಶುರುವಾಗಿದೆ. ನಂತರ ನೋವು ತಡೆಯಲಾರದೇ ಗಾಲಿ ಕುರ್ಚಿಯಲ್ಲಿ ಕುಳಿತು ಆಸ್ಪತ್ರೆಗೆ ಹೋಗಿದ್ದಾಳೆ. ಈ ವಿಚಾರವನ್ನು ಖುದ್ದು ಯುವತಿಯೇ Instagramನಲ್ಲಿ ಪೋಸ್ಟ್ ಮಾಡಿದ್ದಾಳೆ.
ಈ ವರ್ಷದ ಆರಂಭದಲ್ಲಿ ಇದೇ ರೀತಿ ಗ್ಯಾಸ್ ಬಿಡದೇ ಕಟ್ಟಿಕೊಂಡು ಬ್ರೆಜಿಲಿಯನ್ ಗಾಯಕ ಪೊಕಾಹ್ ಕೂಡ ಆಸ್ಪತ್ರೆ ಸೇರಿದ್ದರು. ವಿಮಾನ ನಿಲ್ದಾಣದಲ್ಲಿ ನಾನು ಭಯಾನಕ ನೋವನ್ನು ಅನುಭವಿಸಲು ಪ್ರಾರಂಭಿಸಿದೆ. ಗಾಲಿಕುರ್ಚಿಯಲ್ಲಿ ಕುಳಿತು ಆಸ್ಪತ್ರೆಗೆ ಸೇರಿದೆ ಅಂತಾ ಬರೆದುಕೊಂಡಿದ್ದಾಳೆ. ಗಾಯಕ ಪೊಕಾಹ್‌ಗೆ ಈ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದಾಳೆ. ಕೇವಲ ಗ್ಯಾಸ್ ತುಂಬಿಕೊಂಡಿದ್ದಕ್ಕೆ ಇಷ್ಟೆಲ್ಲಾ ಸಮಸ್ಯೆ ಆಗಿರಲಿಕ್ಕಿಲ್ಲ. ಬೇರೆ ಏನಾದರೂ ಗಂಭೀರ ಅನಾನುಕೂಲ ಆಗಿರಬಹುದು ಅಂತಾ ಹಲವರು ಅಭಿಪ್ರಾಯಪಟ್ಟಿದ್ದಾರೆ.