
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇವರುಗಳ ಸಂಭಾವನೆಗಾಗಿ ಒಟ್ಟು 175 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅತಿಥಿ ಶಿಕ್ಷಕರ ಸಂಭಾವನೆಗಾಗಿ 2022 – 23ನೇ ಸಾಲಿಗೆ ಈ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನು ಆದ್ಯತೆಯ ಮೇಲೆ ವೆಚ್ಚ ಮಾಡಬೇಕಾಗಿದ್ದು, ಒಂದು ವೇಳೆ ತಾಲೂಕು ಪಂಚಾಯಿತಿ ಅಥವಾ ಅನುಷ್ಠಾನಾಧಿಕಾರಿಗಳ ಹಂತದಲ್ಲಿ ವಿಳಂಬವಾದರೆ ಮತ್ತು ಆ ಕಾರಣಕ್ಕಾಗಿ ಅನುದಾನ ಬಳಕೆಯಾಗದಿದ್ದರೆ ಮತ್ತೆ ಅನುದಾನ ಒದಗಿಸಲಾಗುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.