ಸಾಕುಪ್ರಾಣಿ ನಾಯಿಯನ್ನು ಕಾರಿನಲ್ಲಿ ಅಥವಾ ಬೈಕಿನಲ್ಲಿ ಅದರ ಮಾಲೀಕರು ಒಯ್ಯುವುದು ಸಾಮಾನ್ಯ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಕೆರಳಿಸಿದೆ.
ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದರೆ, ಶ್ವಾನವನ್ನು ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಅದರ ಕತ್ತಿಗೆ ಕಟ್ಟಿದ ಹಗ್ಗವನ್ನು ಹಿಡಿದುಕೊಂಡಿದ್ದಾನೆ. ಹೀಗಾಗಿ ನಾಯಿಯು ರಸ್ತೆಯುದ್ದಕ್ಕೂ ಓಡುತ್ತಾ ತೆರಳಬೇಕಾಯಿತು. ಈ ದೃಶ್ಯವನ್ನು ವಿಡಿಯೋ ಕಂಟೆಂಟ್ ಕ್ರಿಯೇಟರ್ ವಿವೇಕ್ ಜಾದೂ ಎಂಬುವವರು ಚಿತ್ರೀಕರಿಸಿದ್ದಾರೆ. ನಾಯಿಯನ್ನು ಅಮಾನುಷವಾಗಿ ನೋಡಿಕೊಂಡಿದ್ದಕ್ಕೆ ಬೈಕ್ ಸವಾರರನ್ನು ನೆಟ್ಟಿಗರು ಜರೆದಿದ್ದಾರೆ.
ಯುನೈಸ್ ಚಂಡಮಾರುತಕ್ಕೆ ಯುಕೆ ತತ್ತರ: ಚಲಿಸುತ್ತಿದ್ದ ಬಸ್ ಮೇಲೆಯೇ ಉರುಳಿಬಿದ್ದ ಮರ…..!
ಆದರೆ, ಅದೃಷ್ಟವಶಾತ್ ಆಪದ್ಭಾಂದವರಂತೆ ಬಂದ ಸ್ಕೂಟರ್ ಸವಾರರು ನಾಯಿಯ ದುಸ್ಥಿತಿಗೆ ಮರುಗಿದ್ದಾರೆ. ಕೂಡಲೇ ಬೈಕ್ ಅನ್ನು ನಿಲ್ಲಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ಕೊನೆಗೆ ಶ್ವಾನವನ್ನು ತಾವು ಹಿಡಿದುಕೊಂಡು ಬರುವುದಾಗಿ ಒಪ್ಪಿ ತಮ್ಮ ಸ್ಕೂಟರ್ ನಲ್ಲಿ ಕೂರಿಸಿ, ಮುಂದೆ ಸಾಗಿದ್ದಾರೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸ್ಕೂಟರ್ ಸವಾರರ ಮಾನವೀಯತೆಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
https://youtu.be/JakARVuy70Y