alex Certify ಪ್ರಾಣಿಗಳಿಗಿಂತ ಮನುಷ್ಯರ ಆಯಸ್ಸು ಹೆಚ್ಚಾಗಿರುವುದೇಕೆ….? ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಿಗಳಿಗಿಂತ ಮನುಷ್ಯರ ಆಯಸ್ಸು ಹೆಚ್ಚಾಗಿರುವುದೇಕೆ….? ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಪ್ರಾಣಿಗಳಿಗಿಂತ ಮನುಷ್ಯರಿಗೆ ಆಯುಷ್ಯ ಹೆಚ್ಚು. ನಾಯಿ, ಬೆಕ್ಕು ಸೇರಿದಂತೆ ಅನೇಕ ಪ್ರಾಣಿಗಳು ಕೇವಲ 20 ವರ್ಷ ಬದುಕುತ್ತವೆ. ಆದ್ರೆ 100 ವರ್ಷಕ್ಕಿಂತ ಹೆಚ್ಚು ಕಾಲ ಬದುಕಿರುವ ಮನುಷ್ಯರೂ ನಮ್ಮಲ್ಲಿದ್ದಾರೆ. ಮಾನವರ ಆಯಸ್ಸು ಕಡಿಮೆ ಅಂದರೂ 50 ರಿಂದ 60 ವರ್ಷಗಳು. ಇದಕ್ಕೆ ಕಾರಣ ಏನು ಅನ್ನೋದು ಬಹಳ ಇಂಟ್ರೆಸ್ಟಿಂಗ್‌ ಆಗಿದೆ.

ಮಾನವರ ಸರಾಸರಿ ವಯಸ್ಸು 70 ರಿಂದ 80 ವರ್ಷಗಳು ಅನ್ನೋದು ಈಗಾಗ್ಲೇ ಸಾಬೀತಾಗಿದೆ. 2017ರಲ್ಲಿ ವಿಶ್ವಸಂಸ್ಥೆ ಜಾಗತಿಕ ಸರಾಸರಿ ಜೀವಿತಾವಧಿ 72.6 ವರ್ಷಗಳು ಎಂದು ಅಂದಾಜಿಸಿದೆ. ಮಾನವರ ದೀರ್ಘಾಯುಷ್ಯಕ್ಕೂ ನಮ್ಮ ದೇಹದ ಗಾತ್ರಕ್ಕೂ ಸಂಬಂಧವಿದೆ ಎಂದು ವಿಜ್ಞಾನಿಗಳು ಭಾವಿಸಿದ್ದರು. ದೇಹ ಸಣ್ಣದಾಗಿದ್ದರೆ ಶಕ್ತಿಯನ್ನು ತ್ವರಿತವಾಗಿ ಹೊರಹಾಕುತ್ತದೆ. ಇದೇ ವಯಸ್ಸಿನಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ ಅನ್ನೋದು ವಿಜ್ಞಾನಿಗಳ ಅಭಿಪ್ರಾಯ.

ಉದಾಹರಣೆಗೆ ಇಲಿಯ ಸರಾಸರಿ ಜೀವಿತಾವಧಿ 3.7 ವರ್ಷಗಳು, ನಾಯಿಯ ಆಯಸ್ಸು 10 ರಿಂದ 13 ವರ್ಷಗಳು.ಆದ್ರೆ ಐದು ಇಂಚಿನ ಇನ್ನೊಂದು ಬಗೆಯ ಇಲಿಗಳು ನಾಯಿಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ. ಈ ಇಲಿಗಳ ಸರಾಸರಿ ವಯಸ್ಸು ಜಿರಾಫೆಗಳ ಸರಾಸರಿ ವಯಸ್ಸಿಗೆ ಸಮನಾಗಿರುತ್ತದೆ. ಜಿರಾಫೆ 24 ವರ್ಷಗಳವರೆಗೆ ಜೀವಿಸಿದ್ರೆ, ಈ ಇಲಿಗಳ ಆಯುಷ್ಯ 25 ವರ್ಷ. ಹಾಗಾಗಿ ವಯಸ್ಸನ್ನು ದೇಹದ ಗಾತ್ರದ ಜೊತೆ ಜೋಡಿಸುವ ವಿಜ್ಞಾನಿಗಳ ಸಿದ್ಧಾಂತ ಇಲ್ಲಿ ತಪ್ಪೆಂದು ಸಾಬೀತಾಗಿದೆ.

ಈ ಬಗ್ಗೆ ಮತ್ತೊಂದು ಅಧ್ಯಯನ ನಡೆದಿದ್ದು, ಅದರ ಪ್ರಕಾರ ಆನುವಂಶಿಕತೆ ಮತ್ತು ಡಿಎನ್‌ಎ ರೂಪಾಂತರವೇ ದೀರ್ಘ ಅಥವಾ ಕಡಿಮೆ ಆಯಸ್ಸಿನ ಹಿಂದಿನ ಕಾರಣ ಎಂದು ಹೇಳಲಾಗ್ತಿದೆ. ದೀರ್ಘಾವಧಿವರೆಗೆ ಬದುಕುವ ಪ್ರಾಣಿಗಳು ತಮ್ಮ ಡಿಎನ್ಎ ರೂಪಾಂತರಗಳನ್ನು ನಿಧಾನಗೊಳಿಸುತ್ತವೆ. ಇಲಿ ಮತ್ತು ಹುಲಿಯಂತಹ ಪ್ರಾಣಿಗಳಲ್ಲಿ ಇದೇ ರೀತಿಯ ಆನುವಂಶಿಕ ಬದಲಾವಣೆಗಳು ಕಂಡುಬಂದಿವೆ.

ಆಸಕ್ತಿಕರ ಸಂಗತಿ ಅಂದ್ರೆ ದೈಹಿಕ ರೂಪಾಂತರಗಳು ಹಾಗೂ ವಯಸ್ಸಿನ ಮಧ್ಯೆ ಸಂಬಂಧವಿದೆ. ಮನುಷ್ಯರು ಒಂದು ವರ್ಷದಲ್ಲಿ ಕೇವಲ 47 ರೂಪಾಂತರಗಳನ್ನು ಎದುರಿಸಬೇಕಾಗುತ್ತದೆ. 3.7 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಇಲಿಗಳು, ಪ್ರತಿ ವರ್ಷ 796 ರೂಪಾಂತರಗಳನ್ನು ಎದುರಿಸುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...