ನೈಋತ್ಯ ಫ್ಲೋರಿಡಾದಲ್ಲಿ ಇಯಾನ್ ಚಂಡಮಾರುತದ ದಾಳಿಯಿಂದ ಅತಿವೃಷ್ಟಿ ಉಂಟಾಗಿದ್ದು ಈ ವೇಳೆ ಪ್ರವಾಹ ಪೀಡಿತ ಬೀದಿಗಳಲ್ಲಿ ಶಾರ್ಕ್ ಓಡಾಟ ಕಂಡುಬಂದಿದೆ.
ಮುಳುಗಿರುವ ಫೋರ್ಟ್ ಮೈಯರ್ಸ್ ಗಾರ್ಡನ್‌ನಲ್ಲಿ ಚೂಪಾದ ಬೆನ್ನಿನ ರೆಕ್ಕೆಗಳನ್ನು ಹೊಂದಿರುವ ದೊಡ್ಡದಾದ, ಶಾರ್ಕ್ ಮೀನುಗಳು ಈಜುವುದನ್ನು ತೋರಿಸುವ ವೀಡಿಯೊ, ಟ್ವಿಟರ್‌ನಲ್ಲಿ ಒಂದು ದಿನದೊಳಗೆ 13 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಸ್ಥಳೀಯ ರಿಯಲ್ ಎಸ್ಟೇಟ್ ಡೆವಲಪರ್ ಡೊಮಿನಿಕ್ ಕ್ಯಾಮೆರಟ್ಟಾ ಅವರು ಬುಧವಾರ ಬೆಳಿಗ್ಗೆ ತಮ್ಮ ನೆರೆಹೊರೆಯವರ ಗಾರ್ಡನ್‌ನಲ್ಲಿ ಅನುಮಾನಾಸ್ಪದವಾಗಿ ಸುತ್ತಲೂ ಹರಿದಾಡುತ್ತಿರುವುದನ್ನು ಗಮನಿಸಿ ಚಿತ್ರೀಕರಿಸಿದ್ದಾರೆ.
ಈ ಕ್ಲಿಪ್ ಶಾರ್ಕ್ ಅಥವಾ ದೊಡ್ಡ ಗಾತ್ರದ ಮೀನು ಇರಬಹುದು ಎಂಬ ಬಗ್ಗೆ ನೆಟ್ಟಿಗರು ಮಿಶ್ರ ಅಭಿಪ್ರಾಯವನ್ನು ಹೊಂದಿದ್ದಾರೆ. ಕೆಲವರು ಇದನ್ನು “ಸ್ಟ್ರೀಟ್ ಶಾರ್ಕ್” ಎಂದು ಕರೆದಿದ್ದಾರೆ.
ಪೆನ್ಸಿಲ್ವೇನಿಯಾದ ಎರಿಯಲ್ಲಿರುವ ಮರ್ಸಿಹರ್ಸ್ಟ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಲೆಸ್ಲೀ ಗುಲ್ಚರ್ ವೀಡಿಯೊವನ್ನು ನಕಲಿ ಎಂದು ಆರಂಭದಲ್ಲಿ ಭಾವಿಸಿದ್ದರು. ಇದು ನಿಜವೆಂದು ಭಾವಿಸಬೇಡಿ. ವೀಡಿಯೊದಲ್ಲಿನ ಮಾಹಿತಿಯ ಪ್ರಕಾರ ಇದನ್ನು ಜೂನ್ 2010ರಲ್ಲಿ ರೆಕಾರ್ಡ್ ಮಾಡಲಾಗಿದೆ. ಇದನ್ನು ಬೆಳಿಗ್ಗೆ 10 ಗಂಟೆಗೆ ಪೋಸ್ಟ್ ಮಾಡಿದ್ದು, ಚಂಡಮಾರುತದ ಉಲ್ಬಣವು ಬೆಳಿಗ್ಗೆ 10 ಗಂಟೆಗೆ ಇರಲಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆದರೆ ಬುಧವಾರ ಬೆಳಗ್ಗೆ ಇದನ್ನು ಸೆರೆಹಿಡಿಯಲಾಗಿದೆ ಎಂದು ಮೂಲ ಕ್ಲಿಪ್‌ನ ಮೆಟಾಡೇಟಾದಲ್ಲಿ ದೃಢಪಟ್ಟಿದೆ.