ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಇಬ್ಬರು ಕಂದಾಯ ಅಧಿಕಾರಿಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಘಟನೆ ನಡೆದು 9 ದಿನಗಳ ಬಳಿಕ ಅವರಲ್ಲಿ ಓರ್ವ ಅಧಿಕಾರಿಯ ಮೃತದೇಹ ಸುಮಾರು 350 ಕಿಮೀ ದೂರದಲ್ಲಿ ಪತ್ತೆಯಾಗಿದೆ. ಶವವನ್ನು ಕುಟುಂಬಸ್ಥರು ಗುರುತಿಸಿದ್ದಾರೆ.
ತಹಶೀಲ್ದಾರ್ ನರೇಂದ್ರ ಸಿಂಗ್ ಠಾಕೂರ್ ಹಾಗೂ ಮಹೇಂದ್ರ ಸಿಂಗ್ ರಜಾಕ್ ಮೃತ ದುರ್ದೈವಿಗಳು. ಆಗಸ್ಟ್ 15ರಂದು ಇಬ್ಬರೂ ಪಾರ್ಟಿ ಮುಗಿಸಿಕೊಂಡು ವಾಪಸ್ಸಾಗುತ್ತಿದ್ರು. ಉಕ್ಕಿ ಹರಿಯುತ್ತಿದ್ದ ಸಿವಾನ್ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಅದೇ ದಿನ ಮಹೇಂದ್ರ ಸಿಂಗ್ ಶವ ಪತ್ತೆಯಾಗಿತ್ತು. ನರೇಂದ್ರ ಸಿಂಗ್ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.
ಅಂದಿನಿಂದ್ಲೂ ಪೊಲೀಸರು ತಲಾಶ್ ನಡೆಸುತ್ತಲೇ ಇದ್ದರು. ಇತರ ಠಾಣೆಗಳಿಗೂ ಮಾಹಿತಿ ರವಾನಿಸಲಾಗಿತ್ತು. ತೀವ್ರ ಹುಡುಕಾಟದ ಬಳಿಕ 350 ಕಿಮೀ ದೂರದಲ್ಲಿ ಶವ ಪತ್ತೆಯಾಗಿದೆ. ಠಾಕೂರ್ ಅವರ ಮಗ ಮತ್ತು ಮಗಳು ಮೃತದೇಹವನ್ನು ಗುರುತಿಸಿದ್ದಾರೆ. ಅಗತ್ಯ ವಿಧಿವಿಧಾನಗಳ ನಂತರ ಪಾರ್ಥಿವ ಶರೀರವನ್ನು ಅಂತಿಮ ಸಂಸ್ಕಾರಕ್ಕಾಗಿ ಠಾಕೂರ್ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.