ಕೊರೊನಾ ಆರ್ಭಟ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದೊಂದೇ ಚಟುವಟಿಕೆಗಳು ಆರಂಭವಾಗುತ್ತಿವೆ. ಕಳೆದ ಐವತ್ತಕ್ಕೂ ಅಧಿಕ ದಿನಗಳಿಂದ ಮನೆಗಳಲ್ಲಿ ಬಂಧಿಯಾಗಿದ್ದ ಸಾರ್ವಜನಿಕರು ಇದೀಗ ತಮ್ಮ ಎಂದಿನ ಚಟುವಟಿಕೆಗಳಿಗೆ ಮರಳುತ್ತಿದ್ದಾರೆ.
ಇದರ ಮಧ್ಯೆ ಪ್ರವಾಸಿ ತಾಣಗಳು ಸಹ ಮುಕ್ತವಾಗಿದ್ದು, ಪ್ರವಾಸ ಪ್ರಿಯರಿಗೆ ಸಂತಸ ತಂದಿದೆ. ವಿಶ್ವ ಪ್ರಸಿದ್ಧ ಜೋಗ ಸೇರಿದಂತೆ ರಾಜ್ಯದ ಎಲ್ಲ ಪ್ರವಾಸಿ ತಾಣಗಳನ್ನು ಇಂದಿನಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.
ಪ್ರವಾಸ ಪ್ರಿಯರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಈ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಭೇಟಿ ವೇಳೆ ಮಾಸ್ಕ್ ಧಾರಣೆ ಕಡ್ಡಾಯವಾಗಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಿದೆ.