ಚುಮುಚುಮು ಚಳಿಯಲ್ಲಿ ಮುನ್ನಾರ್ ಭೇಟಿ ಮನಸ್ಸಿಗೆ ಮುದ ನೀಡುವುದು ಗ್ಯಾರಂಟಿ. ಅಷ್ಟು ಸುಂದರವಾಗಿದೆ ಈ ಪ್ರವಾಸಿ ತಾಣ. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಇದು ಪ್ರವಾಸಿಗರ ನೆಚ್ಚಿನ ತಾಣ ಕೂಡ ಹೌದು.
ಇಲ್ಲಿನ ಆರ್ಕಷಕ ಟೀ ಪ್ಲಾಂಟೇಶನ್ ಗಳು, ನಯನ ಮನೋಹರ ಪಟ್ಟಣ, ರಜಾ ದಿನದ ಸೌಕರ್ಯಗಳು ಈ ಪಟ್ಟಣವನ್ನೇ ಜನಪ್ರಿಯ ರೆಸಾರ್ಟ್ ಆಗಿ ಬದಲಾಯಿಸಿದೆ. ರಜಾ ದಿನಗಳನ್ನು ಕಳೆಯಲು ಇದು ಒಳ್ಳೆಯ ಜಾಗವೆನ್ನಬಹುದು.
ಮುನ್ನಾರ್ ಎಂದರೆ ಮೂರು ನದಿಗಳು ಎಂದರ್ಥ. ಇಲ್ಲಿ ಮಧುರಪುಳ, ನಲತಣ್ಣಿ ಮತ್ತು ಕುಂಡಲಿ ಎಂಬ ಮೂರು ನದಿಗಳು ಹರಿಯುತ್ತದೆ. ಮುನ್ನಾರ್ ನ ಸಮೀಪದಲ್ಲಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಎರವಿಕುಲಮ್ ರಾಷ್ಟ್ರೀಯ ಉದ್ಯಾನವನವೂ ಒಂದಾಗಿದೆ.
ಇನ್ನು ಪ್ರವಾಸಿಗರಿಗೆ ಇನ್ನೊಂದು ಅಚ್ಚರಿಯನ್ನು ನೀಡುವ ಮುನ್ನಾರ್ ಪಟ್ಟಣದಿಂದ 13 ಕಿ.ಮೀ. ದೂರದಲ್ಲಿ ಇರುವ ಸ್ಥಳವೇ ಮಟ್ಟುಪೆಟ್ಟಿಯಾಗಿದೆ.ಇದು ದೋಣಿ ನಡೆಸುವವರಿಗೆ ಅದ್ಭುತ ಅವಕಾಶ ನೀಡುತ್ತದೆ.