ತಾಜ್ ಮಹಲ್ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ವಾಸ್ತುಶಿಲ್ಪಿಯ ಮೇರುಕೃತಿಗಳಲ್ಲಿ ಒಂದಾಗಿದೆ. ಹಲವಾರು ಮಂದಿ ಪ್ರಪಂಚದ ಅದ್ಭುತದ ಪ್ರತಿಕೃತಿ ತಾಜ್ ಮಹಲ್ ಅನ್ನು ರಚಿಸಲು ಪ್ರಯತ್ನಿಸಿದ್ದಾರೆ. ಆದರೆ ಇವ್ಯಾವುದೂ ಗುಲ್ಮಾರ್ಗ್‌ನಲ್ಲಿ ಕೆತ್ತಿದ ಹಿಮ ತಾಜ್ ಮಹಲ್‌ನಷ್ಟು ಸುಂದರವಾಗಿ ಮೂಡಿಬಂದಿಲ್ಲ.
ಹೌದು, ಗುಲ್ಮಾರ್ಗ್ ನಲ್ಲಿ ಹಿಮದಿಂದ ತಾಜ್ ಮಹಲ್ ನಂತೆಯೇ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಇದನ್ನು ಗ್ರ್ಯಾಂಡ್ ಮುಮ್ತಾಜ್ ಹೋಟೆಲ್‌ನ ತಂಡ ನಿರ್ಮಿಸಿದ್ದಾರೆ. ಇಗ್ಲೂ ಕೆಫೆಯನ್ನು ಇಲ್ಲಿ ನಿರ್ಮಿಸಲಾಗಿತ್ತು. ಈ ಕೆಫೆ ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ. ಇದೀಗ, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಗುಲ್ಮಾರ್ಗ್‌ನಲ್ಲಿ ಸ್ನೋ ತಾಜ್ ಮಹಲ್ ಅನ್ನು ನಿರ್ಮಿಸಲಾಗಿದೆ.
ವರದಿ ಪ್ರಕಾರ, ಶಿಲ್ಪವನ್ನು ಪೂರ್ಣಗೊಳಿಸಲು 17 ದಿನಗಳನ್ನು ತೆಗೆದುಕೊಂಡಿದೆ. ಶಿಲ್ಪದ ಎತ್ತರವು ಸುಮಾರು 16 ಅಡಿ ಇದ್ದು 24 ಅಡಿ ವಿಸ್ತೀರ್ಣವನ್ನು ಹೊಂದಿದೆ. ಈ ಋತುವಿನಲ್ಲಿ ಗುಲ್ಮಾರ್ಗ್ಗೆ ಭೇಟಿ ನೀಡುವ ಪ್ರವಾಸಿಗರು, ಮೋಡಿ ಮಾಡುವ ತಾಜ್ ಮಹಲ್ ಪ್ರತಿಕೃತಿಯ ಚಿತ್ರವನ್ನು ಪಡೆಯದೆ ತೆರಳುತ್ತಿಲ್ಲ.
ಇದೀಗ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇಗ್ಲೂ ಕೆಫೆಯ ನಂತರ ಕಳೆದ ಕೆಲವು ದಿನಗಳಲ್ಲಿ ಈ ಸ್ಥಳವು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ಎರಡನೇ ಸ್ಥಳವಾಗಿದೆ.