ಥೈಲ್ಯಾಂಡ್ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ತನ್ನ ಸಂಸ್ಕೃತಿಗೆ ಮಾತ್ರವಲ್ಲದೆ ಆಹಾರ ಮತ್ತು ಜೀವನಶೈಲಿಗೆ ಹೆಸರುವಾಸಿಯಾಗಿದೆ. ಇದು ವಿಶ್ವದ ಅತ್ಯಂತ ಆನಂದದಾಯಕ ದೇಶಗಳಲ್ಲಿ ಒಂದಾಗಿದೆ.
ಆದಾಗ್ಯೂ, ಥೈಲ್ಯಾಂಡ್ನಲ್ಲಿ ವೇಶ್ಯೆಯೊಬ್ಬರು 55 ವರ್ಷ ವಯಸ್ಸಿನ ವ್ಯಕ್ತಿಯ ಕಿವಿಯ ಒಂದು ಭಾಗವನ್ನು ಕಚ್ಚುವ ಮೂಲಕ ಅವರ ಆನಂದದಾಯಕ ಪ್ರವಾಸವನ್ನು ಭಯಾನಕವಾಗಿಸಿರೋ ಘಟನೆ ನಡೆದಿದೆ.
ಪಾರ್ಟಿ ಸಿಟಿ ಪಟ್ಟಾಯದಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ಸಿನ ಹಿಂಬದಿಯಲ್ಲಿ ವೇಶ್ಯೆಯೊಬ್ಬರು ಪ್ರವಾಸಿಗರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಆಕೆ ವಿಪರೀತ ಮದ್ಯ ಸೇವನೆಯಿಂದ ನಶೆಯಲ್ಲಿದ್ದಳು. 25 ವರ್ಷದ ಕನ್ನಿಕಾ ಕಾಮ್ಟನ್ ತೆರೆದ ಬಸ್ನ ಹಿಂಬದಿಗೆ ಜಿಗಿದು 55 ವರ್ಷದ ವ್ಯಕ್ತಿಯನ್ನು ಅಡ್ಡಗಟ್ಟಿದ್ದಾಳೆ.
ಯುವತಿಯು ಬಸ್ ಹತ್ತುವಾಗ ಬಸ್ ಸಿಗ್ನಲ್ ನಲ್ಲಿ ನಿಂತಿತ್ತು. ಆಕೆ ವಿಪರೀತ ಮದ್ಯ ಸೇವನೆ ಮಾಡಿದ್ದರಿಂದ, ಮದ್ಯದ ಅಮಲಿನಲ್ಲಿ ವ್ಯಕ್ತಿಯ ಬಲ ಕಿವಿಯ ಒಂದು ಭಾಗವನ್ನು ಕಚ್ಚಿಯೇ ಬಿಟ್ಟಿದ್ದಾಳೆ. ಈ ವೇಳೆ ವ್ಯಕ್ತಿಯು ಜೋರಾಗಿ ಕಿರುಚಿದ್ದಾರೆ.
ಕೂಡಲೇ ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುವನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಬ್ಯಾಂಡೇಜ್ ಮಾಡಿದರು. ಮಹಿಳೆ ಓಡಿಹೋಗಲು ಯತ್ನಿಸಿದ್ರೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.