ದಿನನಿತ್ಯದ ಬ್ಯುಸಿ ಲೈಫ್ ನಲ್ಲಿ ಮನಸ್ಸು ದೇಹ ಸ್ವಲ್ಪ ರೆಸ್ಟ್ ಬಯಸೋದು ಸಾಮಾನ್ಯ. ರಿಲಾಕ್ಸ್ ಗಾಗಿ ಕೆಲವರು ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡ್ತಾರೆ. ವಿದೇಶಕ್ಕೆ ಹೋಗುವಷ್ಟು ಹಣ ಇರೋದಿಲ್ಲ.
ಸ್ವದೇಶದಲ್ಲಿ ಯಾವ ಊರನ್ನು ಕಡಿಮೆ ಬೆಲೆಗೆ ನೋಡಿ ಬರಬಹುದೆಂಬ ಮಾಹಿತಿ ಇರೋದಿಲ್ಲ. ಭಾರತದ ಈ ಐದು ಸ್ಥಳಗಳನ್ನು ಆರಾಮವಾಗಿ ನೋಡಿಬರಬಹುದು.
ಲಾನ್ಸ್ ಡೌನ್: ಉತ್ತರಾಖಂಡದ ಸುಂದರ ಹಿಲ್ ಸ್ಟೇಷನ್ ಇದು. ಇಲ್ಲಿಗೆ ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಬರ್ತಾರೆ. ಬಸ್ ಮೂಲಕ ಸುಲಭವಾಗಿ ಈ ಸ್ಥಳವನ್ನು ತಲುಪಬಹುದಾಗಿದೆ. ಎಲ್ಲ ಬೆಲೆಯ ಹೊಟೇಲ್ ಗಳೂ ಇಲ್ಲಿವೆ.
ಕಸೋಲ್ : ಹಿಮಾಚಲ ಪ್ರದೇಶದಲ್ಲಿರುವ ಕಸೋಲ್ ಕೂಡ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ. ಒಂದು ವಾರ ಆರಾಮವಾಗಿ ಯಾವ ಚಿಂತೆಯಿಲ್ಲದೆ ಇಲ್ಲಿ ಕಳೆಯಬಹುದಾಗಿದೆ.
ತವಾಂಗ್ : ಅರುಣಾಚಲ ಪ್ರದೇಶದ ಪರ್ವತಗಳ ನಡುವೆ ತವಾಂಗ್ ಸ್ಥಿತವಾಗಿದೆ. 5 ಸಾವಿರ ರೂಪಾಯಿಯಲ್ಲಿ ನೀವು ಆರಾಮವಾಗಿ ಪ್ರವಾಸ ಮುಗಿಸಿ ಬರಬಹುದಾಗಿದೆ. ಸುಂದರ ಕಣಿವೆಗಳ ನಡುವೆ ಸಂತೋಷವಾಗಿ ಸುತ್ತಾಡಲು ಅವಕಾಶವಿದೆ.
ಜೈಪುರ : ರಾಜಸ್ಥಾನದ ಪಿಂಕ್ ಸಿಟಿ ಎಂದೇ ಹೆಸರುವಾಸಿಯಾಗಿರುವ ಜೈಪುರ ಕೂಡ ಅಗ್ಗದ ಊರು. ಇಲ್ಲಿ ಕೂಡ ಅನೇಕ ಪ್ರವಾಸಿಗರು ಬರ್ತಾರೆ. ಕಡಿಮೆ ಬೆಲೆಯಲ್ಲಿ ಸುಂದರ ಸಿಟಿಯನ್ನು ಕಣ್ತುಂಬಿಕೊಳ್ತಾರೆ.
ಅಮೃತಸರ : ಪಂಜಾಬ್ ನ ಅಮೃತಸರ ಕೂಡ ಕಡಿಮೆ ಬಜೆಟ್ ನ ಪ್ರವಾಸಕ್ಕೆ ಸೂಕ್ತ ಸ್ಥಳ. ಸ್ವರ್ಣ ಮಂದಿರ ಹೊರತುಪಡಿಸಿ ಇಲ್ಲಿ ಇನ್ನೂ ಅನೇಕ ಪ್ರವಾಸಿ ಸ್ಥಳಗಳಿವೆ. ಕಡಿಮೆ ಬೆಲೆಯ ಹೊಟೇಲ್ ಗಳು ಇಲ್ಲಿವೆ.