ಪ್ರವಾದಿ ಮಹಮ್ಮದ್ ವಿರುದ್ಧ ನೂಪುರ್ ಶರ್ಮ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ವಿಚಾರ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಒಂದು ದೊಡ್ಡ ಸುದ್ದಿ ಮಾಡಿತ್ತು. ಇರಾನ್, ಕುವೈತ್ ಸೇರಿದಂತೆ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಇದನ್ನು ಖಂಡಿಸಿದ್ದವು. ಬಳಿಕ ನೂಪುರ್ ಶರ್ಮಾ ಅವರನ್ನು ಬಿಜೆಪಿ ವಕ್ತಾರೆ ಸ್ಥಾನದಿಂದ ವಜಾ ಮಾಡಲಾಗಿತ್ತು.
ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನಾ ಮೆರವಣಿಗೆಗಳ ನಡೆದಿದ್ದು ಕೆಲವೆಡೆ ಇದು ಹಿಂಸಾಚಾರಕ್ಕೂ ತಿರುಗಿತ್ತು. ಇದೀಗ ಮತ್ತೊಂದು ಪ್ರಕರಣದಲ್ಲಿ ಉತ್ತರಪ್ರದೇಶದ ಯುವಕನೊಬ್ಬ ಪ್ರವಾದಿ ಮಹಮ್ಮದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದು ಆತನನ್ನು ಈಗ ಬಂಧಿಸಲಾಗಿದೆ.
ಬಲಿಯಾ ಜಿಲ್ಲೆ ರಸಢಾ ಪ್ರದೇಶದ ಕುರೇಜಿ ಗ್ರಾಮದ ನಿವಾಸಿ ಬಜರಂಗ್ ಸಿಂಗ್ ರಜಪೂತ್ ಎಂಬಾತ ಇನ್ಸ್ಟಾಗ್ರಾಮ್ ನಲ್ಲಿ ಭಾನುವಾರದಂದು ಈ ಪೋಸ್ಟ್ ಹಾಕಿದ್ದು, ಇದನ್ನು ಗಮನಿಸಿದವರೊಬ್ಬರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಬಜರಂಗ್ ಸಿಂಗ್ ನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.