ಪ್ರಯಾಣ ಮಾಡುವಾಗ ನಿಮಗೆ ವಾಂತಿ ಬರುತ್ತದೆಯೇ, ಅದಕ್ಕಾಗಿ ನೀವು ಮಾತ್ರೆ ತೆಗೆದುಕೊಳ್ಳುತ್ತೀರೇ? ಹಾಗಿದ್ದರೆ ಇಲ್ಲಿ ಕೇಳಿ. ಇದು ಅನ್ನನಾಳದ ಸ್ನಾಯುಗಳು ತಪ್ಪು ಹೊತ್ತಿನಲ್ಲಿ ಸಡಿಲಗೊಂಡು ಗ್ಯಾಸ್ಟ್ರಿಕ್ ದ್ರವಗಳನ್ನು ಮರಳಿ ಅನ್ನನಾಳಕ್ಕೆ ಕಳಿಸುವ ಸ್ಥಿತಿಯಾಗಿದ್ದು ಇದು ವಾಕರಿಕೆ ಅಥವಾ ವಾಂತಿಗೆ ಕಾರಣವಾಗುತ್ತದೆ. ಅರೆ ತಲೆನೋವು ಮೈಗ್ರೇನ್ ಅಥವಾ ಅರೆ ತಲೆನೋವಿನಿಂದ ಬಳಲುತ್ತಿರುವವರಿಗೂ ಸಹ ವಾಕರಿಕೆ ಅಥವಾ ವಾಂತಿ ಆಗಬಹುದು.
ಅತಿಯಾದ ಮದ್ಯ ಸೇವನೆಯೂ ವಾಂತಿಗೆ ಕಾರಣವಾಗಬಹುದು. ಇದರ ಹೊರತಾಗಿಯೂ ನಿಮಗೆ ಪ್ರಯಾಣದ ವೇಳೆ ವಾಂತಿಯಾಗುತ್ತಿದ್ದರೆ ಅದು ವಂಶವಾಹಿಗಳ ಮೂಲಕ ಬಂದಿರಬಹುದು. ಮಗಳೂ ಅಮ್ಮನ ತರಹ ಪ್ರಯಾಣ ಮಾಡುವಾಗ ವಾಂತಿ ಮಾಡುತ್ತಾಳೆ ಎಂದು ಹೇಳಿರುವುದನ್ನು ನೀವು ಕೇಳಬಹುದು.
ಇದನ್ನು ತಡೆಯಬೇಕಾದರೆ ಪ್ರಯಾಣದ ಕನಿಷ್ಠ ಒಂದು ಗಂಟೆ ಮೊದಲು ಊಟ ಮಾಡಿ ಮುಗಿಸಬೇಕು. ಆ ಬಳಿಕ ಪಾನೀಯವನ್ನು ಸೇವಿಸಬಾರದು. ಪ್ರಯಾಣದ ವೇಳೆ ಲಿಂಬೆ ಹಣ್ಣು ಅಥವಾ ಕಿತ್ತಳೆ ಹಣ್ಣನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಇದನ್ನು ಮೂಗಿನ ಬಳಿ ಹಿಡಿಯುವುದರಿಂದ ವಾಂತಿಯ ಅಥವಾ ವಾಕರಿಕೆಯ ಅನುಭವ ಕಡಿಮೆಯಾಗುತ್ತದೆ.