ಕೆಲವರಿಗೆ ಜರ್ನಿ ಅಂದರೆ ಕಸಿವಿಸಿ. ಎಲ್ಲಿ ವಾಂತಿಯಾಗಿ ಸುಸ್ತಾಗಿ ಹೋಗುತ್ತೇವೆ ಅನ್ನೋ ಟೆನ್ಶನ್. ವಾಂತಿ, ತಲೆ ಸುತ್ತು, ಸುಸ್ತು ನಿಲ್ಲುವ ಮಾತ್ರೆಗಳಿದ್ದರೂ ಸೇವಿಸಲು ಕೆಲವರು ಇಷ್ಟ ಪಡುವುದಿಲ್ಲ.
ಅಂತಹವರು ಮನೆಯಿಂದ ಹೊರಡುವ ಮುನ್ನ ಕೆಲವೊಂದು ಮನೆ ಮದ್ದುಗಳನ್ನು ತೆಗೆದುಕೊಳ್ಳುವುದರಿಂದ ತಲೆ ಸುತ್ತುವಿಕೆ ಮತ್ತು ವಾಂತಿಯನ್ನು ತಡೆಯಬಹುದು.
* ಒಂದು ಕಪ್ ನಿಂಬೆ ಜ್ಯೂಸ್ ಗೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿದ ಬಳಿಕ ಪ್ರಯಾಣ ಆರಂಭಿಸಬೇಕು.
* ಪ್ರಯಾಣಕ್ಕೂ ಮುನ್ನ ಒಂದು ಲೋಟ ಬಿಸಿಯಾದ ಪುದೀನಾ ಟೀ ಸೇವಿಸಬೇಕು. ಇದರ ಜೊತೆಗೆ ಕೆಲವು ಪುದೀನಾ ಎಲೆಗಳನ್ನು ಚಿಕ್ಕ ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು. ವಾಹನ ಪ್ರಯಾಣ ಆರಂಭಿಸಿದ ತಕ್ಷಣ ಒಂದೆರಡು ಪುದೀನಾ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಇದ್ದರೆ ವಾಂತಿ ಬರುವುದಿಲ್ಲ.
* ಒಂದು ವೇಳೆ ಊಟ ಮಾಡಿದ ಬಳಿಕ ಪ್ರಯಾಣ ಮಾಡುವುದಾದರೆ ಊಟ ಮುಗಿದಾದ ಮೇಲೆ ಒಂದು ಲೋಟ ಹಸಿ ಶುಂಠಿಯ ಟೀ ಕುಡಿದು ನಂತರ ಹೊರಡಬೇಕು. ಇದು ಜೀರ್ಣ ಕ್ರಿಯೆಗೂ ಉತ್ತಮವಾಗಿದೆ.
* ಪ್ರಯಾಣದ ಅವಧಿಯಲ್ಲಿ ವಾಕರಿಕೆ ಉಂಟಾದರೆ ನಿಂಬೆ ಹಣ್ಣಿನ ವಾಸನೆಯನ್ನು ಸೇವಿಸುತ್ತಾ ಹೋದಲ್ಲಿ ವಾಂತಿ ಆಗುವುದಿಲ್ಲ.