ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಟರ್ ಸಿಟಿ ಎಕ್ಸ್ಪ್ರೆಸ್ ರೈಲು ಚಲಿಸುತ್ತಿದ್ದಾಗಲೇ ಪ್ರಯಾಣಿಕರಿದ್ದ ಬೋಗಿ ಬೇರ್ಪಟ್ಟ ಪರಿಣಾಮ ಕೆಲ ದೂರ ಇಂಜಿನ್ ಮಾತ್ರ ಚಲಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಈ ರೈಲು ಭದ್ರಾವತಿ ತಾಲೂಕು ಬಿಳಕಿ ಬಳಿ ಇದ್ದ ಸಂದರ್ಭದಲ್ಲಿ ತಾಂತ್ರಿಕ ದೋಷದ ಕಾರಣಕ್ಕೆ ಇಂಜಿನ್ ಬೋಗಿಯಿಂದ ಬೇರ್ಪಟ್ಟಿದೆ. ಇದರ ಪರಿಣಾಮ ಬೋಗಿಯ ವೇಗ ಇದ್ದಕ್ಕಿದ್ದಂತೆ ಕಡಿಮೆಯಾಗಿ ಬಳಿಕ ಸ್ಥಗಿತಗೊಂಡಿದೆ.
ಅತ್ತ ಇಂಜಿನ್ ಒಂದೇ ಮುಂದೆ ಚಲಿಸಿದ್ದು ಇದು ಪೈಲೆಟ್ ಹಾಗೂ ಲೋಕೋ ಪೈಲೆಟ್ ಗಮನಕ್ಕೆ ಬಂದಿದೆ. ಕೂಡಲೇ ಎಂಜಿನ್ ವಾಪಸ್ ತೆಗೆದುಕೊಂಡು ಬಂದ ಅವರು ಬೋಗಿಯನ್ನು ಕೂಡಿಸಿ ಭದ್ರಾವತಿಯವರೆಗೆ ರೈಲು ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಸಂಪೂರ್ಣವಾಗಿ ದುರಸ್ತಿಪಡಿಸಿದ ಬಳಿಕ ಒಂದು ತಾಸು ತಡವಾಗಿ ರೈಲು ಚಲಿಸಿದೆ.