ಪ್ರಯಾಣಿಕರಿಗೆ ಶುಭ ಸುದ್ದಿಯೊಂದು ಸಿಕ್ಕಿದ್ದು, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಐದನೇ ‘ವಂದೇ ಭಾರತ್’ ರೈಲು ಸಂಚರಿಸಲಿದೆ.
ಚೆನ್ನೈ – ಬೆಂಗಳೂರು – ಮೈಸೂರು ನಡುವೆ ಒಟ್ಟು 483 ಕಿಲೋ ಮೀಟರ್ ದೂರವನ್ನು ಈ ರೈಲು ಕ್ರಮಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 10 ರಂದು ಈ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.
‘ವಂದೇ ಭಾರತ್’ ರೈಲುಗಳು ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಅತಿ ವೇಗವಾಗಿ ಕ್ರಮಿಸಲಿವೆ. ದೇಶದಲ್ಲಿ ಈಗಾಗಲೇ ನಾಲ್ಕು ‘ವಂದೇ ಭಾರತ್’ ರೈಲುಗಳಿಗೆ ಚಾಲನೆ ನೀಡಲಾಗಿದ್ದು, ಐದನೇ ರೈಲು ಬೆಂಗಳೂರು ಮಾರ್ಗವಾಗಿ ಚೆನ್ನೈ – ಮೈಸೂರು ನಡುವೆ ಸಂಚರಿಸಲಿದೆ.