alex Certify ಪ್ರಯಾಣಿಕರಿಗೆ ಗುಡ್ ನ್ಯೂಸ್: ‘ನಮ್ಮ ಯಾತ್ರಿ’ ಆಪ್ ಆಧಾರಿತ ಆಟೋ ಸೇವೆಗೆ ಚಾಲನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ಗುಡ್ ನ್ಯೂಸ್: ‘ನಮ್ಮ ಯಾತ್ರಿ’ ಆಪ್ ಆಧಾರಿತ ಆಟೋ ಸೇವೆಗೆ ಚಾಲನೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ನಮ್ಮ ಯಾತ್ರಿ’ ಆಪ್ ಆಧಾರಿತ ಆಟೋ ಸೇವೆಗೆ ಕನ್ನಡ ರಾಜ್ಯೋತ್ಸವ ದಿನವಾದ ಇಂದು ಚಾಲನೆ ನೀಡಲಾಗಿದೆ. ಓಲಾ – ಉಬರ್ ಆಟೋಗಳಿಗೆ ಸೆಡ್ಡು ಹೊಡೆದು ಬೆಂಗಳೂರಿನ ಆಟೋ ಚಾಲಕರ ಯೂನಿಯನ್ ವತಿಯಿಂದ ಇದನ್ನು ಆರಂಭಿಸಲಾಗಿದೆ.

ಆಟೋ ಸೇವೆ ನೀಡುತ್ತಿದ್ದ ಓಲಾ – ಉಬರ್ ಮನಬಂದಂತೆ ಶುಲ್ಕ ವಿಧಿಸುವ ಮೂಲಕ ಪ್ರಯಾಣಿಕರು ಹಾಗೂ ಚಾಲಕರುಗಳಿಗೆ ವಂಚಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಆಟೋ ದರವನ್ನು ನಿಗದಿ ಮಾಡಿದ್ದು, ‘ನಮ್ಮ ಯಾತ್ರಿ’ ಆಪ್ ಇದೇ ದರದಲ್ಲಿ ಸೇವೆ ನೀಡಲಿದೆ.

2 ಕಿಲೋ ಮೀಟರ್ ಗೆ 30 ರೂಪಾಯಿ ಬುಕ್ಕಿಂಗ್ ಚಾರ್ಜ್ 10 ರೂಪಾಯಿ ಸೇರಿದಂತೆ ಕನಿಷ್ಠ ದರ 40 ರೂಪಾಯಿಗಳಾಗಿದ್ದು, ಆ ಬಳಿಕ ಪ್ರತಿ ಕಿಲೋಮೀಟರ್ ಗೆ 15 ರೂಪಾಯಿ ದರ ನಿಗದಿಪಡಿಸಲಾಗಿದೆ. ಸುಮಾರು 16000 ಆಟೋ ಚಾಲಕರು ‘ನಮ್ಮ ಯಾತ್ರಿ’ ಆಪ್ ಗೆ ನೋಂದಾಯಿಸಿಕೊಂಡಿದ್ದು, ಈ ಸೇವೆಗೆ ಇಂದಿನಿಂದಲೇ ಚಾಲನೆ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...