
ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಸಾಕಷ್ಟು ಬದಲಾವಣೆಗಳನ್ನು ತರುತ್ತಲೇ ಇದೆ. ಇದೀಗ ನೈಜ ಸಮಯದಲ್ಲಿ ರೈಲುಗಳ ಪ್ರಯಾಣದ ವಿವರಗಳನ್ನು ವಾಟ್ಸಾಪ್ ಮೂಲಕ ಟ್ರ್ಯಾಕ್ ಮಾಡಲು ಅನುವು ಮಾಡಿಕೊಡಲಾಗ್ತಿದೆ.
ರೈಲು ಪ್ರಯಾಣಿಕರು ತಮ್ಮ PNR ಸ್ಟೇಟಸ್ ಮತ್ತು ರೈಲು ಪ್ರಯಾಣದ ರಿಯಲ್ ಟೈಮ್ ವಿವರಗಳನ್ನು ವಾಟ್ಸಾಪ್‌ನಲ್ಲಿ ಪಡೆಯಬಹುದಾಗಿದೆ. ಈ ಫೀಚರ್, ಟಿಕೆಟ್ ಬುಕಿಂಗ್ ಅಪ್ಲಿಕೇಶನ್‌ಗಳು ಮತ್ತು ಸೈಟ್‌ಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ವಾಟ್ಸಾಪ್‌ನಲ್ಲಿ ಅಪ್ಡೇಟ್ ಲಭ್ಯವಾಗುವುದರಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ವಾಟ್ಸಾಪ್‌ನಲ್ಲಿ ಪ್ರಯಾಣ-ಸಂಬಂಧಿತ ವಿವರಗಳನ್ನು ಪಡೆಯುವ ಫೀಚರ್ ಅನ್ನು ಮುಂಬೈ ಮೂಲದ ಸ್ಟಾರ್ಟಪ್ ರೈಲೋಫಿಯ ಅಭಿವೃದ್ಧಿಪಡಿಸಿದೆ. ಇದು ಪ್ರಯಾಣಿಕರಿಗೆ ಒಂದು ಕ್ಲಿಕ್ ಮೂಲಕ ತಮ್ಮ ಪ್ರಯಾಣದ ಸ್ಥಿತಿಯನ್ನು ಪರಿಶೀಲಿಸಲು ಮತ್ತು ವಾಟ್ಸಾಪ್‌ನಲ್ಲಿ ಎಲ್ಲಾ ವಿವರಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಹೀಗಾಗಿ ವಿವಿಧ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಗೊಂದಲ ನಿಮಗಿರುವುದಿಲ್ಲ. ನೀವು ವಾಟ್ಸಾಪ್ ಚಾಟ್‌ಬಾಟ್‌ನಲ್ಲಿ 10-ಅಂಕಿಯ PNR ಸಂಖ್ಯೆಯನ್ನು ನಮೂದಿಸಿದ ನಂತರ, ರೈಲು ಪ್ರಯಾಣದ ಎಲ್ಲಾ ವಿವರಗಳು ಲಭ್ಯವಾಗುತ್ತವೆ.
PNR ಸ್ಟೇಟಸ್, ರೈಲು ಎಲ್ಲಿದೆ ಎಂಬ ಬಗ್ಗೆ ಲೈವ್ ಸ್ಟೇಟಸ್, ಹಿಂದಿನ ರೈಲು ನಿಲ್ದಾಣಗಳ ವಿವರಗಳು, ಮುಂಬರುವ ನಿಲ್ದಾಣಗಳ ವಿವರಗಳು ಸುಲಭವಾಗಿ ದೊರೆಯುತ್ತವೆ. IRCTC ಪ್ರಯಾಣಿಕರು ಲೈವ್ ರೈಲು ಸ್ಟೇಟಸ್‌ಗಾಗಿ ಭಾರತೀಯ ಸಹಾಯವಾಣಿ ಸಂಖ್ಯೆ 139ನ್ನು ಸಹ ಸಂಪರ್ಕಿಸಬಹುದು.
ವಾಟ್ಸಾಪ್‌ನಲ್ಲಿ PNR ಸ್ಟೇಟಸ್ ಮತ್ತು ರೈಲಿನ ಅಪ್ಡೇಟ್ ಪಡೆಯುವುದು ಹೇಗೆ ?
ನೀವು ರೈಲೋಫಿಯ ವಾಟ್ಸಾಪ್ ಚಾಟ್‌ಬಾಟ್ ಸಂಖ್ಯೆ – +919881193322 ಅನ್ನು ಸೇವ್ ಮಾಡಿಕೊಳ್ಳಬೇಕು.
ನಂತರ ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಅನ್ನು ನವೀಕರಿಸಿ. ಈಗ ವಾಟ್ಸಾಪ್ ತೆರೆಯಿರಿ ಮತ್ತು ನಿಮ್ಮ ಕಾಂಟಾಕ್ಟ್ ಲಿಸ್ಟ್ ಅನ್ನು ರಿಫ್ರೆಶ್ ಮಾಡಿ.
ನಂತರ ರೈಲೋಫಿಯ ಚಾಟ್ ವಿಂಡೋವನ್ನು ತೆರೆಯಿರಿ. ನೀವು ವಾಟ್ಸಾಪ್ ಚಾಟ್‌ನಲ್ಲಿ ನಿಮ್ಮ 10-ಅಂಕಿಯ PNR ಸಂಖ್ಯೆಯನ್ನು ಕಳುಹಿಸಬಹುದು.
ರೈಲೋಫಿ ಚಾಟ್‌ಬಾಟ್ ನಿಮ್ಮ ರೈಲು ಪ್ರಯಾಣದ ಕುರಿತು ಎಲ್ಲಾ ಎಚ್ಚರಿಕೆಗಳು ಮತ್ತು ನೈಜ-ಸಮಯದ ನವೀಕರಣಗಳನ್ನು ನಿಮಗೆ ಫಾರ್ವರ್ಡ್ ಮಾಡುತ್ತದೆ.
ವಾಟ್ಸಾಪ್‌ನಲ್ಲಿ ನಿರಂತರ ಲೈವ್ ಅಪ್‌ಡೇಟ್‌ಗಳು, ಎಚ್ಚರಿಕೆಗಳು ಮತ್ತು ಸ್ಟೇಟಸ್‌ಗಾಗಿ ಪ್ರಯಾಣ ಪ್ರಾರಂಭವಾಗುವ ಮೊದಲು PNR ಸಂಖ್ಯೆಯನ್ನು ಕಳುಹಿಸಬಹುದು.